ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಅತ್ತಿಗೆಯೊಂದಿಗೆ ಅನೈತಿಕ ಸಂಬಂಧದ ಶಂಕೆ: ಅಣ್ಣನಿಂದ ತಮ್ಮನ ಕೊಲೆ

Published 17 ಫೆಬ್ರುವರಿ 2024, 13:56 IST
Last Updated 17 ಫೆಬ್ರುವರಿ 2024, 13:56 IST
ಅಕ್ಷರ ಗಾತ್ರ

ಹಾವೇರಿ: ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಸಂಶಯದಿಂದ ಅಣ್ಣನೇ ತಮ್ಮನನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ನೆಲೋಗಲ್ಲ ತಾಂಡಾದಲ್ಲಿ ಶನಿವಾರ ನಡೆದಿದೆ. 

ನೆಲೋಗಲ್ಲ ತಾಂಡಾದ ಹನುಮಂತಪ್ಪ ಲಮಾಣಿ (55) ಮೃತಪಟ್ಟವರು. ಶಂಕ್ರಪ್ಪ ಲಮಾಣಿ ಕೊಲೆ ಮಾಡಿದ ಆರೋಪಿ. 

ಶಂಕ್ರಪ್ಪ ಲಮಾಣಿ, ಆರೋಪಿ

ಶಂಕ್ರಪ್ಪ ಲಮಾಣಿ, ಆರೋಪಿ

‘ಹನುಮಂತಪ್ಪ ಲಮಾಣಿಯು ಪತ್ನಿ ತೀರಿಕೊಂಡ ಬಳಿಕ ಆತನ ಅಣ್ಣ ಶಂಕ್ರಪ್ಪ ಲಮಾಣಿ ಕುಟುಂಬದ ಜತೆಯಲ್ಲಿ ವಾಸವಾಗಿದ್ದ. ಹನುಮಂತಪ್ಪನು ಅತ್ತಿಗೆಯೊಂದಿಗೆ ಸಲುಗೆಯಿಂದ ಇರುವುದು ಮತ್ತು ಒಟ್ಟಿಗೆ ಕೂಲಿ ಕೆಲಸಕ್ಕೆ ಹೋಗಿ ಬಂದು ಮಾಡುತ್ತಿದ್ದರು. ಇವರಿಬ್ಬರ ಮಧ್ಯೆ ಅನೈತಿಕ ಸಂಬಂಧ ಇರಬಹುದು ಎಂದು ಶಂಕ್ರಪ್ಪನು ತಮ್ಮ ಮತ್ತು ಪತ್ನಿಯೊಂದಿಗೆ ಆಗಾಗ್ಗೆ ಜಗಳ ಮಾಡಿಕೊಂಡು ಬಂದಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ. 

ಇದೇ ಸಿಟ್ಟು ಮತ್ತು ಸಂಶಯದಿಂದ ಮನೆಯ ಅಂಗಳದಲ್ಲಿ ಮಲಗಿದ್ದ ತಮ್ಮ ಹನುಮಂತಪ್ಪನನ್ನು ಶಂಕ್ರಪ್ಪ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಹಾವೇರಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT