ಶುಕ್ರವಾರ, ಮೇ 20, 2022
23 °C

ವದಂತಿಗೆ ಕಿವಿಗೊಡಬೇಡಿ: ಪೌರಾಯುಕ್ತರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ, ಕಡು ಬಡವರಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಜಿ+1 ಮಾದರಿ ಅಡಿಯಲ್ಲಿ ವಸತಿ ಕಲ್ಪಿಸುತ್ತೇವೆ ಎಂದು ನಗರಸಭೆ ಹಾವೇರಿಯ ಹೆಸರು ಹೇಳಿ ಹಣವನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ಜನರಿಂದ ಮೌಖಿಕ ದೂರುಗಳು ಬಂದಿವೆ. 

ನಗರಸಭೆಯಿಂದ ಆಯ್ಕೆಯಾದ ಫಲಾನುಭವಿಗಳಿಗೆ ನೋಟಿಸ್‌ ನೀಡಿ, ಆನ್‌ಲೈನ್‌ ಬ್ಯಾಂಕ್‌ ಚಲನ್‌ ಮುಖಾಂತರ ನಿಗದಿತ ಖಾತೆಗೆ ಸಂದಾಯ ಮಾಡಿಸಿಕೊಳ್ಳಲಾಗುವುದು. ಕಾರಣ ಸಾರ್ವಜನಿಕರು ಸುಳ್ಳು ವದಂತಿಗಳನ್ನು ಕೇಳಿ ಮೂರನೇ ವ್ಯಕ್ತಿಯ ಕೈಯಲ್ಲಿ ಹಣ ಕೊಡಬಾರದು. ಒಂದು ವೇಳೆ ದುಡ್ಡು ಕೊಟ್ಟರೆ ಅದಕ್ಕೆ ನಗರಸಭೆ ಹೊಣೆಯಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು