ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

Published 6 ಡಿಸೆಂಬರ್ 2023, 13:14 IST
Last Updated 6 ಡಿಸೆಂಬರ್ 2023, 13:14 IST
ಅಕ್ಷರ ಗಾತ್ರ

ಅಕ್ಕಿಆಲೂರ: ‘ಶ್ರಮಿಕ ಪಂಚಮಸಾಲಿ ಸಮಾಜದ ಸಮುದಾಯವನ್ನು 2 ಎ ವರ್ಗಕ್ಕೆ ಸೇರಿಸಬೇಕು. ಈ ನಿಟ್ಟಿನಲ್ಲಿ ಹೋರಾಟ ನಡೆಯಲು ಸಮಾಜದ ಜನರ ಸಂಘಟನೆಯ ಅಗತ್ಯವಿದೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಹಾನಗಲ್ ತಾಲ್ಲೂಕಿನ ಅರಳೇಶ್ವರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಗ್ರಾಮ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪಂಚಮಸಾಲಿ ಜನಸಂಖ್ಯೆ ಹೆಚ್ಚಿದ್ದರೂ ಸರ್ಕಾರದ ಸೌಲಭ್ಯಗಳು ಸಮಾಜದ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಹಲವು ವರ್ಷಗಳಿಂದ ಹೋರಾಟ ನಡೆಸಿದರೂ ಸರ್ಕಾರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದಿಯೇ ಹೊರತು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಪಂಚಮಸಾಲಿ ಸಮುದಾಯದ ಶ್ರೀಗಳು ಕಳೆದ ಹಲವು ವರ್ಷಗಳಿಂದಲೂ ಸಮಾಜದ ಸಂಘಟನೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುಂದುವರೆಯೋಣ. ಸರ್ಕಾರದಿಂದ ಸಿಗಬೇಕಿರುವ ನ್ಯಾಯಯುತ ಸೌಲಭ್ಯ ಪಡೆಯೋಣ ಎಂದು ಹೇಳಿದರು.

ನ್ಯಾಯವಾದಿಗಳಾದ ಸೋಮಶೇಖರ ಕೋತಂಬರಿ, ಮಧು ಪಾಣಿಗಟ್ಟಿ ಮಾತನಾಡಿದರು.

ಪಂಚಮಸಾಲಿ ಸಮಾಜ ತಾಲೂಕಾಧ್ಯಕ್ಷ ಮಹದೇವಪ್ಪ ಬಾಗಸರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಲಸೂರು, ಗ್ರಾ.ಪಂ ಅಧ್ಯಕ್ಷ ಕೊಟ್ರೇಶ ಅಂಗಡಿ, ಸದಸ್ಯ ಚಂದ್ರಪ್ಪ ಬಾರ್ಕಿ, ಮುಖಂಡರಾದ ಕೆ.ಟಿ.ಕಲಗೌಡ್ರ, ಬಸನಗೌಡ ಪಾಟೀಲ, ದಯಾನಂದ ನಾಗನೂರ, ಜಗದೀಶ ಬೆಣ್ಣಿ, ಮೂಕಪ್ಪ ಚಿಕ್ಕೇರಿ, ಜಗದೀಶ ಚಿಕ್ಕೇರಿ, ಸುರೇಶ ಚಿಕ್ಕೇರಿ, ಗಂಗಪ್ಪ ಲೇಖಿ, ಶಂಭಣ್ಣ ಲೇಖಿ, ಸುರೇಶ ಗಾಳಿ, ಈರಪ್ಪ ಕೂಡಲ, ಮಲ್ಲೇಶಪ್ಪ ಲೇಖಿ, ಮಾಲತೇಶ ಬಿಡೇದ, ಬಸವರಾಜ ಅಂಗಡಿ, ಬಸವರಾಜ ಪೂಜಾರ, ಮಹಾಲಿಂಗಪ್ಪ ಲೇಖಿ, ರುದ್ರಪ್ಪ ಬಳಿಗಾರ, ಯಲ್ಲಪ್ಪ ಕರಿಭೀಮಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT