ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಮಕ್ಕಳ ಮನಗೆದ್ದ ಅವಳಿ ಶಿಕ್ಷಕರು

ಕಚ್ಚಾ ಸಾಮಗ್ರಿಗಳಿಂದ ಪರಿಣಾಮಕಾರಿ ಬೋಧನೆ: ಕಾರ್ಯಾಗಾರದಲ್ಲಿ ಶಿಕ್ಷಕರಿಗೂ ಮಾರ್ಗದರ್ಶನ
Last Updated 4 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಕುಮಾರಪಟ್ಟಣ: ವಿಜ್ಞಾನ ಪ್ರಯೋಗ, ಯೋಗ, ಸಂಗೀತ ಮಿಶ್ರಿತ ಬೋಧನೆ ಮೂಲಕ ರಾಣೆಬೆನ್ನೂರು ತಾಲ್ಲೂಕಿನ ನದಿಹರಳಹಳ್ಳಿಮಾರುತಿ ಗ್ರಾಮಾಂತರ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಎಂ.ಪಿ. ಅಂಗಡಿ ಹಾಗೂ ರಾಣೆಬೆನ್ನೂರಿನ ಮುನ್ಸಿಪಲ್‌ ಹೈಸ್ಕೂಲ್‌ ಶಿಕ್ಷಕ ಆರ್‌.ಬಿ. ಪಾಟೀಲ ಅವರು ಮಕ್ಕಳ ಮನ ಗೆದ್ದಿದ್ದಾರೆ.

ಎಂ.ಪಿ. ಅಂಗಡಿ ಅವರು2012ರಲ್ಲಿ ಕುಂದಾಪುರ ವಿಜ್ಞಾನ ತರಬೇತಿ, 2016-17ರಲ್ಲಿ ಬೆಂಗಳೂರು ಮತ್ತು 2018ರಲ್ಲಿ ಮೈಸೂರು ಇನ್ಫೋಸಿಸ್‌ ತರಬೇತಿಯಿಂದ ಸ್ಫೂರ್ತಿ ಪಡೆದರು. ಯೂಟ್ಯೂಬ್‌ನಲ್ಲಿ ವಿಜ್ಞಾನ ಪ್ರಯೋಗ ವಿಡಿಯೊಗಳ ವೀಕ್ಷಣೆಯಿಂದ ಹೊಸ ಹೊಳಹು ಕಂಡುಕೊಂಡರು. ಅನುಭವಿಗಳ ಸಲಹೆಯಂತೆ ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು ತರಗತಿ ಕೋಣೆಯಲ್ಲಿ ಪರಿಣಾಮಕಾರಿ ಬೋಧನೆಯಲ್ಲಿ ಯಶಸ್ವಿಯಾದರು.

ಶಿಕ್ಷಕರಿಗೆ ತರಬೇತಿ: ಹಾವೇರಿ ಜಿಲ್ಲಾ ಡಯಟ್‌ ಸೇರಿದಂತೆ ವಿಶ್ವಾಸ ಕಿರಣ, ಸಾಧನ ಪುಷ್ಠಿ ಹೀಗೆ ವಿವಿಧ ಹಂತಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಹಲವು ಪ್ರಯೋಗಗಳನ್ನು ಪರಿಚಯಿಸಲಾಗಿದೆ. ಸುರಕ್ಷತೆ ಮತ್ತು ಅಗತ್ಯ ಜ್ಞಾನವಿಲ್ಲದೆ ಮಕ್ಕಳು ಹಾಗೂ ಶಿಕ್ಷಕರು ಮನಬಂದಂತೆ ಪ್ರಯೋಗಗಳನ್ನು ಮಾಡದಂತೆ ಎಂ.ಪಿ. ಅಂಗಡಿ ಅವರು ಎಚ್ಚರಿಕೆ ನೀಡುತ್ತಾರೆ.

ಕಾರ್ಯಾಗಾರಗಳಲ್ಲಿ ನೀಡುವ ಗೌರವಧನದಿಂದ ಜೀವ ವಿಜ್ಞಾನ, ರಾಸಾಯನ ಶಾಸ್ತ್ರಕ್ಕೆ ಸಂಬಂಧಿಸಿದ ಮಾದರಿಗಳು, ಚಾರ್ಟ್ಸ್‌ ಹಾಗೂ ವಿಜ್ಞಾನ ಕಿಟ್‌ಗಳನ್ನು ಖರೀದಿಸಿದ್ದೇನೆ. ಒಟ್ಟು ₹1.85 ಲಕ್ಷ ಮೌಲ್ಯದ ಉಪಕರಣಗಳನ್ನು ಸಂಗ್ರಹಿಸಲಾಗಿದೆ. ಪ್ರತಿ ತರಗತಿಯಲ್ಲಿ 2-3 ಪ್ರಯೋಗಗಳನ್ನು ಕೈಗೊಳ್ಳುವೆ. ಈವರೆಗೂ 600ಕ್ಕೂ ಹೆಚ್ಚು ಪ್ರಯೋಗಗಳನ್ನು ಪ್ರದರ್ಶಿಸಲಾಗಿದೆ.

ಸಾಹಿತ್ಯದಲ್ಲೂ ಒಲವು: ಇದಲ್ಲದೆ ಹಾಡು, ಏಕಪಾತ್ರಭಿನಯ ಹಾಗೂ ಸಂಗೀತ, ಸಾಹಿತ್ಯ ಮಿಶ್ರಿತ ವಿಜ್ಞಾನ ಬೋಧನೆ ಮಕ್ಕಳಿಗೆ ಹಿತ ನೀಡಲಿದೆ.ಸಂಗೀತದ ಮೂಲಕ ಲೋಹ, ಅಲೋಹ ಹಾಗೂ ಲೋಹಗಳು (ಆವರ್ತ ಕೋಷ್ಠಕ) ಸುಮಾರು 103-120 ಧಾತುಗಳನ್ನು 3 ನಿಮಿಷದಲ್ಲಿ ಹೇಳುವ ಸುಲಭ ವಿಧಾನವನ್ನು ಮಕ್ಕಳಿಗೆ ಪರಿಚಯಿಸಿದ್ದಾರೆ.

‘ಜೊತೆಗೆ 285 ಸ್ವಾತಂತ್ರ್ಯ ಹೋರಾಟಗಾರರ ಹೆಸರು ನಾಲಿಗೆ ತುದಿಯಲ್ಲಿ ನಲಿದಾಡುತ್ತವೆ. ಸ್ವಂತ ಸಾಹಿತ್ಯದಿಂದ ಸುಲಭ ವಿಜ್ಞಾನದ 20 ಹಾಡುಗಳನ್ನು ರಚಿಸಿದ್ದೇನೆ. ಕನ್ನಡ ಅಭಿಮಾನ ಮೂಡಿಸುವ 40ಕ್ಕೂ ಹೆಚ್ಚು ಸಿನಿಮಾ ಡೈಲಾಗ್‌ ಹೇಳಿ ಮಕ್ಕಳನ್ನು ರಂಜಿಸಿ ಬೋಧನೆಯತ್ತ ಸೆಳೆಯುತ್ತೇನೆ. ಸೇವೆಗಾಗಿ ಹಲವು ಪ್ರಶಸ್ತಿಗಳು ಲಭಿಸಿವೆ’ ಎನ್ನುತ್ತಾರೆ ಶಿಕ್ಷಕ ಅಂಗಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT