ಹಾವೇರಿಯ ಹೊಸ ಎಪಿಎಂಸಿ ಲಾಲ್‌ಬಹದ್ದೂರ ಶಾಸ್ತ್ರಿ ಮಾರುಕಟ್ಟೆ ಎಂ.ಜಿ.ರಸ್ತೆ ಹಳೇ ಪಿ.ಬಿ. ರಸ್ತೆ ಹಾಗೂ ಹೊರವಲಯದ ಹಲವು ಕಡೆಗಳಲ್ಲಿ ಎಲ್ಲೆಂದರಲ್ಲಿ ಬಿಸಾಕಿರುವ ಸೊಪ್ಪಿನ ಗಂಟುಗಳು ಕಾಣಸಿಗುತ್ತಿವೆ. ದರ ಸಿಗದಿದ್ದರಿಂದ ರೈತರು ಎಲ್ಲೆಂದರಲ್ಲಿ ಗಂಟು ಬಿಸಾಕಿ ಹೋಗುತ್ತಿದ್ದಾರೆ. ಇಂಥ ಗಂಟುಗಳನ್ನೇ ಕೆಲವರು ಮಾರುಕಟ್ಟೆಗೆ ತಂದು ತಳ್ಳುಗಾಡಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ.