ಹೊಳೆನರಸೀಪುರ: ಪಟ್ಟಣದಲ್ಲಿ ಶನಿವಾರ ಬಹುತೇಕ ಪ್ರಮುಖ ಔಷಧಿ ಅಂಗಡಿಗಳು ಬಂದ್ ಆಗಿದ್ದು ರೋಗಿಗಳು ಔಷಧಿ ಸಿಗದೆ ಪರದಾಡಿದರು.

ಶನಿವಾರ ಆರ್ಯವೈಶ್ಯ ಸಮುದಾಯದವರು ವಾಸವಿ ಜಯಂತಿ ಆಚರಿಸಿದರು. ಅವರ ಎಲ್ಲಾ ಬಗೆಯ ಅಂಗಡಿಗಳು ಬಂದ್ ಆಗಿದ್ದವು.ಪಟ್ಟಣದಲ್ಲಿ ಇರುವ ಔಷಧಿ ಅಂಗಡಿಗಳ ಪೈಕಿ 10 ಪ್ರಮುಖ ಔಷಧಿ ಅಂಗಡಿಗಳು ಆರ್ಯವೈಶ್ಯರದ್ದಾಗಿದ್ದು ಇವುಗಳು ಬಂದ್ ಆಗಿದ್ದರಿಂದ ರೋಗಿಗಳು ಪರದಾಡಿದರು. ‘ ನಾನು ನನ್ನ ಮಾಮೂಲಿ ಅಂಗಡಿಗೆ ವೈದ್ಯರು ನೀಡಿದ್ದ ಚೀಟಿ ಕೊಟ್ಟು ನಿತ್ಯ ಅದನ್ನೇ ತೆಗೆದುಕೊಳ್ಳುತ್ತಿದ್ದೆ. ಅದು ಯಾವುದೆಂದು ಹೆಸರು ಗೊತ್ತಿಲ್ಲ. ನಾನು ಇವತ್ತು ಔಷಧಿ ತೆಗೆದುಕೊಳ್ಳದಿದ್ದರೆ ನನ್ನ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿ ಆಗಿ ತೊಂದರೆ ಆಗುತ್ತದೆ’ ಎಂದು ರಾಮಪ್ಪ ಎಂಬುವವರು ಕೊರಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.