ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ಮಾನ ಸಮಾರಂಭ: ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ

ರೇವಣಸಿದ್ಧೇಶ್ವರ ಸ್ವಾಮೀಜಿ ಸಲಹೆ
Published 20 ಮೇ 2024, 5:40 IST
Last Updated 20 ಮೇ 2024, 5:40 IST
ಅಕ್ಷರ ಗಾತ್ರ

ಸವಣೂರು: ‘ನಿರಂತರ ಕಠಿಣ ಪರಿಶ್ರಮದಿಂದ ಮಾತ್ರ ಉನ್ನತ ಸಾಧನೆಗೈಯಲು ಸಾಧ್ಯ. ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಮುಂದಾಗಬೇಕು’ ಎಂದು ಬಂಕಾಪೂರದ ಕೆಂಡದಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಧರ್ಮ ಜಾಗೃತಿ ಸಂಪನ್ನ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಹಾಲುಮತ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.

‘ಗ್ರಾಮೀಣ ಪ್ರದೇಶ ಹಾಲುಮತ ಸಮಾಜದ ವಿದ್ಯಾರ್ಥಿಗಳ ಸಾಧನೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರವಾಗಲಿದೆ. ಪಾಲಕರು ಉತ್ತಮ, ಉನ್ನತ ಶಿಕ್ಷಣ ಪಡೆಯಲು ಮಕ್ಕಳಿಗೆ ಸಹಕಾರ ನೀಡುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಸಮಾಜದ ಮಕ್ಕಳ ಪಾತ್ರ ಮುಖ್ಯವಾಗಬೇಕು’ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ಚೇತನ ಬಿಜೂರ, ರೂಪ ಗುಡಿಗೇರಿ, ನಿರ್ಮಲ ಬಳಗಣ್ಣನವರ, ಬಸಮ್ಮ ಮಾಸನಕಟ್ಟಿ, ರೇಣುಕ ಶಿಗ್ಲಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ಸಾವಿತ್ರಿ ಪೂಜಾರ, ಭೀಮವ್ವ ಬಡಕನ್ನವರ, ಗಾಯತ್ರಿ ಬಿಜ್ಜೂರ, ವಿಜಯಲಕ್ಷ್ಮಿ ಕೊಳ್ಳವರ, ಭಾರತಿ ಮೇಟಿ ಅವರನ್ನು ಸನ್ಮಾನಿಸಲಾಯಿತು.

ವಕೀಲ ಗುರುಸ್ವಾಮಿ ಕೆಂಡದಮಠ, ಪ್ರಮುಖರಾದ ಹೊನ್ನಪ್ಪ ಕೊಳ್ಳವರ, ಬರಮಪ್ಪ ಕಲಾದಗಿ, ಉಡಚಪ್ಪ ಮಾನೆಗಾರ, ಮಂಜುನಾಥ ಕೊಪ್ಪದ, ಬಸವರಾಜ ಮುಸುರಿ, ರಮೇಶ ಪೂಜಾರ, ಬಡಪ್ಪ ಅಜ್ಜಣ್ಣವರ, ಮಾರುತಿ ಪೂಜಾರ, ಚಿಕ್ಕಪ್ಪ ಬಿಜ್ಜೂರ, ಯಲ್ಲಪ್ಪ ಮೇಟಿ, ಸಿದ್ದಪ್ಪ ಪೂಜಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT