ಶನಿವಾರ, ಜನವರಿ 23, 2021
24 °C

‘ಸೊಲಬಕ್ಕನವರ ಜೀವನ ಅನುಕರಣೀಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಶಿಲ್ಪಕಲೆಯಲ್ಲಿ ಅನನ್ಯ ಸಾಧನೆ ಮಾಡಿದ ಡಾ.ಟಿ.ಬಿ.ಸೊಲಬಕ್ಕನವರ ಅವರು ಕೇವಲ ವ್ಯಕ್ತಿಯಾಗಿರಲಿಲ್ಲ, ಶಕ್ತಿಯಾಗಿದ್ದರು’ ಎಂದು ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಶ್ರೀಶೈಲ ಹುದ್ದಾರ ಅಭಿಪ್ರಾಯಪಟ್ಟರು. 

ಹಾವೇರಿಯ ಕರ್ನಾಟಕ ಪಬ್ಲಿಕ್ ಶಾಲೆ ವತಿಯಿಂದ ಏರ್ಪಡಿಸಿದ್ದ ‘ಡಾ.ಟಿ.ಬಿ.ಸೊಲಬಕ್ಕನವರ ಅವರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ ‘ಸೊಲಬಕ್ಕನವರ ಅವರ ಸರಳ ಜೀವನ, ಉದಾತ್ತ ವಿಚಾರಗಳು, ಅನನ್ಯ ಸಾಧನೆ ಪ್ರತಿಯೊಬ್ಬರಿಗೂ ಅನುಕರಣೀಯ. ಅವರೊಬ್ಬ ತ್ಯಾಗಮಯಿಯಾಗಿದ್ದು, ಆದರ್ಶಯುತ ಜೀವನ ನಡೆಸಿದರು ಎಂದು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ ಬಸರಕೋಡ್‌, ಕಲಾವಿದ ಕರಿಯಪ್ಪ ಹಂಚಿನಮನೆ, ನವಚೇತನ ಸಮೂಹ ಸಂಸ್ಥೆಗಳ ಸಂಸ್ಥಾಪಕ ನಾಗೇದ್ರ ಮಾಳಿ, ಕೆ.ಪಿ.ಎಸ್ ಶಾಲೆಯ ಗೌರವಾಧ್ಯಕ್ಷರಾದ ಚಂದ್ರಕಲಾ ಮಾಳಿ ಭಾಗವಹಿಸಿದ್ದರು.

ಕೆ.ಪಿ.ಎಸ್ ಶಾಲೆಯ ನಿರ್ದೇಶಕ ವಿಜಯಕುಮಾರ ದೊಡ್ಡವಾಡ, ಕಲಾವಿದರಾದ ವೀರೆಂದ್ರ ಮಾಳಿ, ಅಶೋಕ ಹೊಸಮನಿ ಮಾತನಾಡಿದರು. ಶಾಲೆಯ ಆಡಳಿತ ಅಧಿಕಾರಿ ಸೌಮ್ಯ ಮಾಳಿ, ಪ್ರಾಚಾರ್ಯರಾದ ಮಂಜುನಾಥ ಬಿ.ಎಸ್. ಮುಂತಾದವರು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.