ಶನಿವಾರ, ಏಪ್ರಿಲ್ 1, 2023
23 °C

ಸ್ಫೋಟಕ ಸಿಡಿದು ವ್ಯಕ್ತಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರಕ್ಕೆ ಸಮೀಪದ ಕಾಗಿನೆಲೆ ರಸ್ತೆಯ ಕನಕಾಪುರ– ಕೋಡಿಹಳ್ಳಿ ರಸ್ತೆ ಮಧ್ಯದಲ್ಲಿ ಅಡಕೆ ಗಾತ್ರದ ಸ್ಫೋಟಕ ವಸ್ತು ಸಿಡಿದ ಪರಿಣಾಮ, ವ್ಯಕ್ತಿಯೊಬ್ಬನಿಗೆ ತೀವ್ರವಾದ ಗಾಯಗಳಾಗಿರುವ ಘಟನೆ ಶನಿವಾರ ನಡೆದಿದೆ. 

ಹಾವೇರಿಯ ಹೊಸನಗರದ ಅಬ್ದುಲ್‌ ಖಾದರ್‌ ಹಾದಿಮನಿ‌ ಗಾಯಗೊಂಡ ವ್ಯಕ್ತಿ. ಇವರು ನಗರದ ರೈಲು ನಿಲ್ದಾಣದ ಸಮೀಪದ ಬೂ–ವೀರಾಪುರಕ್ಕೆ ಹೋಗುವ ರಸ್ತೆಯ ಪಕ್ಕದ ಬಯಲು ಜಾಗದಲ್ಲಿ ಮನೆ ಕಟ್ಟಲು ಕಲ್ಲುಗಳನ್ನು ನೋಡಲು ಹೋಗಿದ್ದರು. ಕಲ್ಲುಗಳ ಮಧ್ಯೆ ಸಂಗ್ರಹಿಸಿಟ್ಟಿದ್ದ ಅಡಿಕೆ ಗಾತ್ರದ ವಸ್ತುಗಳನ್ನು ಬೇರೆಡೆ ತಂದು, ಏನೋ ಸಿಕ್ಕಿತು ಎಂದು ಒಂದನ್ನು ಒಡೆದಾಗ ಅದು ಸ್ಫೋಟಿಸಿ ಅವಘಢ ಸಂಭವಿಸಿದೆ. 

30 ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು ಶನಿವಾರ ಘಟನಾ ಸ್ಥಳಗಳಿಗೆ ಶ್ವಾನದಳದೊಂದಿಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು