ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದಿನ ದಿವಸ್‌’ ಆಚರಣೆಗೆ ವಿರೋಧ

Last Updated 13 ಸೆಪ್ಟೆಂಬರ್ 2021, 13:10 IST
ಅಕ್ಷರ ಗಾತ್ರ

ಹಾವೇರಿ: ಕೇಂದ್ರ ಸರ್ಕಾರ ಘೋಷಿಸಿರುವ ಸೆ.14 ದಿನವನ್ನು ‘ಹಿಂದಿ ದಿವಸ್’ ಎಂದು ಆಚರಿಸುವುದನ್ನು ವಿರೋಧಿಸಿ ಹಾಗೂ ಆಡಳಿತದಲ್ಲಿ ಹಿಂದಿಯನ್ನು ಹೇರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಯನ್ನು ಖಂಡಿಸಿ, ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆ ಮನವಿ ಸಲ್ಲಿಸಿದರು.

ಭಾರತದ ಸಂವಿಧಾನದ ಪ್ರಕಾರ, ದೇಶಕ್ಕೆ ಯಾವುದೇ ರಾಷ್ಟ್ರೀಯ ಭಾಷೆಯಿಲ್ಲ.ದೇಶದ 22 ಭಾಷೆಗಳಿಗೆ ರಾಷ್ಟ್ರೀಯ ಸ್ಥಾನಮಾನವನ್ನು ನೀಡಲಾಗಿದ್ದು, ಅದರಲ್ಲಿ ಕನ್ನಡ ಮತ್ತು ಹಿಂದಿ ಭಾಷೆಗಳೂ ಸೇರಿವೆ.ಭಾರತದ ಸಂವಿಧಾನವು ಅನುಷ್ಠಾನಕ್ಕೆ ಬಂದ ದಿನ 26 ಜನವರಿ 1950ರಿಂದ ಮುಂದಿನ 15ವರ್ಷಗಳವರೆಗೆ ದೇವನಾಗರಿ ಲಿಪಿಯನ್ನು ಮತ್ತು ಇಂಗ್ಲಿಷ್ ಭಾಷೆಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ. 1965 ಜನವರಿ 26 ನಂತರ ಅನೂರ್ಜಿತವಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿ ರಾಜ್ಯ ಸರ್ಕಾರವು ಆಡಳಿತ ಭಾಷೆಯಾಗಿ ತನ್ನ ಮಾತೃಭಾಷೆಯನ್ನೇ ಬಳಸಬೇಕು ಎಂದು ತಿಳಿಸಿಲಾಗಿದೆ.ಆದರೆ, ಕೇಂದ್ರ ಸರ್ಕಾರ ಹಿಂದಿ ಭಾಷೆಯ ಮೇಲಿನ ಮೋಹದಿಂದ ಎಲ್ಲ ರಾಜ್ಯಗಳ ಮೇಲೂ ಹೇರುತ್ತಿದೆ.ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಮೋಸ ಹಾಗೂ ರಾಜ್ಯಗಳ ಸಾರ್ವಭೌಮತ್ವವನ್ನು ಪ್ರಶ್ನಿಸುವಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂದಿ ಹೇರಿಕೆ ಕೈಬಿಡದಿದ್ದರೆ,ಜಯ ಕರ್ನಾಟಕ ಸಂಘಟನೆಯು ರಾಜ್ಯದ ಪ್ರತಿ ಗ್ರಾಮಗಳಲ್ಲಿಯು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ ಬೆಂಗಳೂರ, ಉಪಾಧ್ಯಕ್ಷ ಸತೀಶ ಮಡಿವಾಳರ, ಕಾರ್ಯದರ್ಶಿ ಡಿ.ಕೆ. ಅರಸನಾಳ. ಶಹರ ಘಟಕದ ಅಧ್ಯಕ್ಷ ಸಂತೋಷ ಎನ್. ಮಧುರಕರ್, ಸದಸ್ಯರಾದ ದಾದಾಪೀರ ಕಳ್ಳಿಮನಿ, ರಾಮಕೃಷ್ಣ ಜೋಗೇರ, ಪ್ರವೀಣಕುಮಾರ ಕೊತ್ವಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT