ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆಸಿಐನಿಂದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ’

Last Updated 14 ಆಗಸ್ಟ್ 2021, 14:25 IST
ಅಕ್ಷರ ಗಾತ್ರ

ಹಾವೇರಿ: ‘ಮನುಷ್ಯ ತಾನು ಬೆಳೆಯುವ ಜತೆಗೆ ಸುತ್ತಲಿನವರನ್ನೂ ಬೆಳೆಸಬೇಕು. ಸಮಾಜದೊಂದಿಗೆ ಸುಮಧುರ ಬಾಂಧವ್ಯ ಹೊಂದಿರಬೇಕು' ಎಂದು ಜೆಸಿಐ ಅಂತರರಾಷ್ಟ್ರೀಯ ಸಂಸ್ಥೆಯ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಸಿ ರಾಖಿ ಜೈನ್‌ ಅವರು ಅಭಿಪ್ರಾಯಪಟ್ಟರು.

ಹಾವೇರಿಯ ಸಜ್ಜನರ ಫಂಕ್ಷನ್‌ ಹಾಲ್‌ನಲ್ಲಿ ಏರ್ಪಡಿಸಿದ್ದ ‘ಅಧ್ಯಕ್ಷರ ಸಮ್ಮೇಳನ’ವನ್ನು ಉದ್ಘಾಟಿಸಿ ಮಾತನಾಡಿದರು.

‘ವ್ಯಕ್ತಿತ್ವ ವಿಕಸನವನ್ನು ಮುಖ್ಯ ಗುರಿಯನ್ನಾಗಿಸಿಕೊಂಡ ಜೇಸಿಐ ಸಂಸ್ಥೆ, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಯುವ ಪ್ರತಿಭೆಗಳಿಗೆ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಅತ್ಯಂತ ಸಹಕಾರಿಯಾಗಿದೆ ಎಂದು ನುಡಿದರು.

ಸಮ್ಮೆಳನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಾವೇರಿ ಘಟಕದ ಅಧ್ಯಕ್ಷ ಜೆ.ಸಿ ಮಂಜುನಾಥ ಚೂರಿ ಅವರು, ಈ ಸಮ್ಮೇಳನ ಸಂಘಟಿಸಲು ಹಾವೇರಿ ನಗರಕ್ಕೆ ಅವಕಾಶ ನೀಡಿದ್ದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ವಲಯ ನಿರ್ದೇಶಕ ಅರವಿಂದ ಬುರಡ್ಡಿ, ಕಾರ್ಯದರ್ಶಿ ಕಪೀಲ ರಾಠೋಡ, ಕಾರ್ಯಕ್ರಮ ನಿರ್ದೇಶಕ ದತ್ತಾತ್ರೆಯ ಜೋಶಿ ಇದ್ದರು.

ಜೇಸಿ ವಾಣಿಯನ್ನು ಅಶೋಕ ಹಾಡೂರ ವಾಚಿಸಿದರು. ಜೇಸಿ ರಾಜು ಚೌಶೆಟ್ಟಿ ರಾಷ್ಟ್ರೀಯ ಅಧ್ಯಕ್ಷರನ್ನು ಪರಿಚಯಿಸಿದರು. ಜೆಸಿ ಮಲ್ಲಿಕಾರ್ಜುನ ಶಾಂತಗಿರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT