ರಾಣೆಬೆನ್ನೂರು: ಈ ಕಲಿಕಾ ಹಬ್ಬ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುತ್ತವೆ. ಮಕ್ಕಳನ್ನು ಸ್ಪರ್ಧಾಳುವಾಗಿಸಿ, ಪ್ರೋತ್ಸಾಹಿಸಿ ಉಳಿದವರನ್ನು ಮತ್ತಷ್ಟು ಸಾಮರ್ಥ್ಯ ಸಾಧನೆಗೆ ಹುರಿದುಂಬಿಸುವ ಹಬ್ಬ ಕಲಿಕಾ ಹಬ್ಬ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಹೇಳಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.6ರಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾವೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಮಂಗಳವಾರ ರಾಣೆಬೆನ್ನೂರು 1ನೇ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಕಲಿಕಾ ಹಬ್ಬ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಕ್ಷರ ಮೇಳದ ಮೆರವಣಿಗೆಯು ಒಡೆಯರ ಗೌರಿಶಂಕರನಗರದ ದೇವಸ್ಥಾನದಿಂದ ಆರಂಭವಾಯಿತು. ಮೆರವಣಿಗೆಯುದ್ದಕ್ಕೂ ಅಧಿಕಾರಿಗಳು ಹಾಗೂ ಶಿಕ್ಷಕರು ಅಕ್ಷರ ಯಾತ್ರೆ, ಕಲಿಕಾ ಟೋಪಿ, ಅಕ್ಷರ ಛತ್ರಿ, ಕಲಿಕಾ ಮಾಲೆಗಳನ್ನು ಧರಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.

ಕ್ಷೇತ್ರ ಸಮನ್ವಯಾಧಿಕಾರಿ ಮಂಜು ನಾಯಕ, ಎಸ್ಡಿಎಂಸಿ ಅಧ್ಯಕ್ಷೆ ನೀಲವ್ವ ಸಪ್ಪಾಳೆ, ಎಂ.ಎಂ. ಮಾಗನೂರ, ಆರ್.ವಿ.ಪಾಟೀಲ, ಎಸ್.ಎಂ. ಬನ್ನಿಕೋಡ, ಗಂಗಪ್ಪ ನಾಯಕ, ಎಸ್.ಎಸ್. ಹಾದಿಮನಿ, ನಾಗರಾಜ ಶಿವಾನಂದ ಕಬಾಡಿ, ವಿ.ಆರ್.ಮುರ್ಲಾಪುರ, ಬಸವರಾಜ ಕುಸನೂರ, ರಾಜೇಂದ್ರ ಹಾಗೂ ಕೆ.ಎಸ್. ಗುಡಗುಡಿ, ಗುರುಬಸಮ್ಮ ಸುರಳಿಕೇರಿಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.