ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತ ವಿರೋಧಿ ಕಾನೂನು ರದ್ದುಪಡಿಸಿ’-ಕರ್ನಾಟಕ ರಕ್ಷಣಾ ವೇದಿಕೆ

Last Updated 27 ಸೆಪ್ಟೆಂಬರ್ 2021, 14:26 IST
ಅಕ್ಷರ ಗಾತ್ರ

ಹಾವೇರಿ: ರೈತ ವಿರೋಧಿ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸಿ ರೈತ ಹಾಗೂ ಜನಸಾಮಾನ್ಯರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಬೇಕು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ಭಾರತ ಬಂದ್‌ಗೆ ಕರವೇ ಸಂಘಟನೆಯ ಸಂಪೂರ್ಣ ಬೆಂಬಲ ಇದೆ.ರೈತರ ಮೇಲೆ ಸವಾರಿಯನ್ನು ಮಾಡಿದ ಯಾವುದೇ ಸರ್ಕಾರಗಳು ಅಸ್ಥಿತ್ವದಲ್ಲಿ ಉಳಿದ ಉದಾಹರಣೆಗಳಿಲ್ಲ. ರೈತ ವಿರೋಧಿ ಕಾನೂನುಗಳಾದ ಭೂ ಸುಧಾರಣೆ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುತ್ ಖಾಸಗೀಕರಣ ಸೇರಿದಂತೆ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಿ, ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಬಿಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಕರವೇ ಮುಖಂಡರಾದ ನೂರ್‌ ಅಹಮದ್‌ ಲಕ್ಷ್ಮೇಶ್ವರ, ಮಹದೇವಪ್ಪ ಹೆಡಿಗ್ಗೊಂಡ, ಷಣ್ಮುಖಪ್ಪ ಮೆಣಸಿನಹಾಳ, ಸಿ.ಬಿ ದೊಡ್ಡಗೌಡ್ರ, ಯಲ್ಲಪ್ಪ ಮರಾಠೆ, ದ್ಯಾಮಣ್ಣ ಮಲ್ಲಾಡದ, ಪ್ರೇಮಾ ಮೂಲಿಮನಿ, ಯುಸೂಫ ಸೈಕಲಗಾರ, ಮಂಜುನಾಥ ಕಮ್ಮಾರ, ಹನುಮಂತ ಭೋವಿ, ಮೌಲಾಸಾಬ್‌ ನದಾಫ, ಅನಸೂಯಾ ಸಿದ್ದಪ್ಪಳವರ, ಹಬೀಬಾ ತಂಡಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT