ಹಾವೇರಿ: ನಗರದ ಪಂಡಿತ್ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆ ಹಾಗೂ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಸಹಯೋಗದಲ್ಲಿ ಗುರುವಾರ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಕಾರ್ಯಕ್ರಮ ನಡೆಯಿತು.

ಚಿಕ್ಕಮಕ್ಕಳ ತಜ್ಞ ಡಾ.ಸುದೀಪ್ ಪಂಡಿತ್ ಅವರು ತಾಯಂದಿರಿಗೆ ಹಾಗೂ ಗರ್ಭಿಣಿಯರಿಗೆ ತಾಯಿಯ ಹಾಲಿನ ಮಹತ್ವ ಕುರಿತು ಜಾಗೃತಿ ಮೂಡಿಸಿದರು. ತಾಯಂದಿರಿಗೆ ಮಕ್ಕಳ ಕಿಟ್ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ರೊ.ದಯಾನಂದ ಯಡ್ರಾಮಿ, ರೋಟರಿ ಅಸಿಸ್ಟೆಂಟ್ ಗವರ್ನರ್ ಶರತ್ ಮಲ್ಲನಗೌಡರ್, ಜಿ. ವಿ. ಹಿರೇಗೌಡರ್, ಎಂ.ಆರ್. ಪಾಟೀಲ್, ಎಸ್.ಎ. ವಜ್ರಕುಮಾರ್ ಇದ್ದರು.

ಸಸಿ ನೆಡುವ ಕಾರ್ಯಕ್ರಮ: ರೋಟರಿ ಸಂಸ್ಥೆ, ಇನ್ನರ್ ವೀಲ್ ಸಂಸ್ಥೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಗುರುವಾರ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ ಎಚ್. ಅವರು ಪರಿಸರದ ಮಹತ್ವದ ಕುರಿತು ಮಾತನಾಡಿದರು. ಅರಣ್ಯ ಅಧಿಕಾರಿಗಳಾದ ರಾಮಪ್ಪ ಪೂಜಾರ್,ರೋಟರಿ ಸಂಸ್ಥೆಯ ಅಧ್ಯಕ್ಷ ದಯಾನಂದ ಯಡ್ರಾಮಿ, ಇನ್ನರ್ ವೀಲ್ ಅಧ್ಯಕ್ಷೆ ರೇಖಾ ಯಡ್ರಾಮಿ, ಪರಿಸರ ವೇದಿಕೆ ಅಧ್ಯಕ್ಷೆ ಮಾಧುರಿ ದೇವಧರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.