ರಾಣೆಬೆನ್ನೂರು: ‘ಮಹಾ ಮಾನವತವಾದಿ ಬಸವಣ್ಣನವರ ಐಕ್ಯ ಸ್ಥಳವಾದ ಕೂಡಲಸಂಗಮದ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಕೃತಿಯನ್ನು ನೀಡಿದ ಪ್ರಾಧ್ಯಾಪಕ ಕಾಂತೇಶರೆಡ್ಡಿ ಗೋಡಿಹಾಳ ಅವರು ಹಾವೇರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ’ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಇಲ್ಲಿನ ಮೇಡ್ಲೇರಿ ರಸ್ತೆಯ ವಾಗೀಶನಗರದ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಭವನದಲ್ಲಿ ಈಚೆಗೆ ನಡೆದ ಸಾಹಿತಿ ಪ್ರಾಧ್ಯಾಪಕ ಕಾಂತೇಶರೆಡ್ಡಿ ಗೋಡಿಹಾಳ ಅವರ ʻಕೂಡಲಸಂಗಮ ಸಾಂಸ್ಕೃತಿಕ ಅಧ್ಯಯನʼ ಹಾಗೂ ಸಾಹಿತಿ ಜೆ. ಎಸ್. ಪಾಟೇಲ ಅವರ ʻಲಿಂಗಾಯತ ಮುಖಾಮುಖಿʼ ಕೃತಿಗಳ ಬಿಡುಗಡೆ ಹಾಗೂ ಬಸವ ಬೆಳಗು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಂಡೂರಿನ ವಿರಕ್ತಮಠದ ಪ್ರಭುದೇವರ ಸಂಸ್ಥಾನ ಮಠದ ಪೀಠಾಧಿಪತಿ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ, ‘ಶ್ರೀಮಠದಿಂದ ನಿರಂತರವಾಗಿ ಪುಸ್ತಕ ಪ್ರಕಟಣೆಗಳನ್ನು ಮಾಡುತ್ತಾ ಬಂದಿದ್ದು, ಈ ಕೃತಿಗಳು 46ನೇ ಪ್ರಕಟಣೆಯಾಗಿವೆ’ ಎಂದರು.

ಬಸವ ಸೇವಾ ಪ್ರಶಸ್ತಿ ಪುರಸ್ಕೃತ ಹಂಪಿ ವಿಶ್ವವಿದ್ಯಾಲಯದ ಎ.ಎಂ. ಕೃಪಾಶಂಕರ, ವಿದ್ವಾಂಸ ಬಿ .ವಿ. ಶಿರೂರ ಹಾಗೂ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೆ. ರವೀಂದ್ರನಾಥ ಮಾತನಾಡಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಕಾಂತೇಶ ಅಂಬಿಗೇರ ಮತ್ತು ಪ್ರೊ. ಪ್ರಮೋದ ನಲವಾಗಲ ಕೃತಿ ಪರಿಚಯಿಸಿದರು.

ಪ್ರೊ. ಕೆ.ಎಚ್.ಮುಖಣ್ಣವರ, ವಾಸಣ್ಣ ಕುಸಗೂರು, ಜಿ.ಜಿ. ಹೊಟ್ಟೆಗೌಡ್ರ, ರಮೇಶರಡ್ಡಿ ಧರ್ಮರಡ್ಡಿ ಗೋಡಿಹಾಳ, ಎಂ.ಎಸ್. ಜಂಗರಡ್ಡಿ, ಪ್ರಭಾಕರ ಶಿಗ್ಲಿ, ಚಾಮರಾಜ ಕಮ್ಮಾರ, ಪ್ರಭಾಕರ ಮೈದೂರ, ಪ್ರಶಾಂತರಡ್ಡಿ ಎರೆಕುಪ್ಪಿ , ಶಿಪುತ್ರಪ್ಪ ಮಲ್ಲಾಡದ, ಎಚ್. ಶಿವಾನಂದ, ಎಂ.ಡಿ ಹೊನ್ನಮ್ಮನವರ, ಪ್ರೇಮಕುಮಾರ, ಗುಡ್ಡಪ್ಪ ಮಾಳಗುಡ್ಡಪ್ಪನವರ, ಎ.ಬಿ. ರತ್ನಮ್ಮ, ಎಚ್.ಎಸ್. ಮುದಿಗೌಡ್ರ, ವಿರೇಶ ಜಂಬಿಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.