ಹಾವೇರಿ: ಪ್ರಣವಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ

ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ಆರೇಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿ ಅವರಿಗೆ ಸೋಮವಾರ ಕೊಲೆ ಬೆದರಿಕೆ ಪತ್ರವೊಂದು ಬಂದಿದೆ.
ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು.
"ನೀ ಪಂಚಾಯತ್ ಸದಸ್ಯ ಆಗೀನಿ ಅಂತ ಮೆರೆಯಬೇಡ. ನಾವು ಯಾಕೆ ಸುಮ್ಮನಿದ್ದೇವಿ ಗೊತ್ತಾ... ನಿಮ್ಮನ್ನು ಯಾವಾಗ್ಲೋ ಊರು ಬಿಟ್ಟು ಕಳಿಸ್ತಿದ್ವಿ, ನೀವು ಆ ಒಬ್ಬ ವ್ಯಕ್ತಿಯಿಂದ ಬಚಾವ್ ಆಗ್ತಿದ್ದೀರಿ. ನಮಗೆ ಕೊಲೆ ಮಾಡುವುದು ದೊಡ್ಡ ಕೆಲಸ ಅಲ್ಲ. ಟಿಪ್ಪರ್, ಲಾರಿ ತಂದು ಡಿಕ್ಕಿ ಹೊಡೆಸಿದ್ರೆ ಸಾಕು, ನೀವು ಇಲ್ಲದಂತೆ ಮಾಡಬಹುದು' ಎಂದು ಪತ್ರದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ.
ನನಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸ್ವಾಮೀಜಿ ಅವರು ಪೊಲೀಸರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.