ರಾಣೆಬೆನ್ನೂರು: ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಬರುವ ಕೃಷಿ ಹುಟ್ಟುವಳಿಗಳಾದ ಮೆಕ್ಕೆಜೋಳ ಹಾಗೂ ಇತರೆ ಕಾಳುಕಡಿ ಹುಟ್ಟುವಳಿಗಳಿಗೆ ಈ ಟೆಂಡರ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.

ರೈತರ ಕೃಷಿ ಹುಟ್ಟುವಳಿಗಳ ಬೆಲೆ ನಿರ್ಧಾರ ಮಾಡುವ ಸಂದರ್ಭದಲ್ಲಿ ಪಾರದರ್ಶಕತೆ ಹಾಗೂ ಗೌಪ್ಯತೆ ಕಾಪಾಡಿದಂತಾಗುತ್ತದೆ. ಇ- ಟೆಂಡರ್ ನಿಂದ ರೈತರ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆಯು ಸಿಗುತ್ತದೆ.
ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.

ಇಲ್ಲಿನ ಎಪಿಎಂಸಿ ಮಾರುಕಟ್ಟೆಯ ಇ- ಟೆಂಡರ್ ಹಾಲ್ನಲ್ಲಿ ಸೋಮವಾರ ಮೆಕ್ಕೆಜೋಳ ಹಾಗೂ ಇತರೆ ಕಾಳು ಕಡಿ ಹುಟ್ಟುವಳಿಗಳನ್ನು ಈ ಟೆಂಡರ್ ಪದ್ದತಿ ಮೂಲಕ ಮಾರಾಟ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಟೆಂಡರ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಖರೀದಿದಾರರು ಭಾಗವಹಿಸುವುದರಿಂದ ರೈತರ ಕೃಷಿ ಹುಟ್ಟುವಳಿಗಳಿಗೆ ಬೇಡಿಕೆ ಹೆಚ್ಚಾಗಿ ನ್ಯಾಯಯುತ ಬೆಲೆ ಸಿಗಲಿದೆ. ವ್ಯಾಪಾರ ಪ್ರಕ್ರಿಯೆಯು ಡಿಜಟಲೀಕರಣ ಸಾಧ್ಯವಾಗುತ್ತದೆ. ಇದರಿಂದ ರೈತರಿಗೆ ಅನ್ಯಾವಾಗುವದನ್ನು ತಪ್ಪಿಸಬಹುದು ಎಂದರು.

ಎಪಿಎಂಸಿ ಕಾರ್ಯದರ್ಶಿ ಶೈಲಜಾ ಎಂ.ವಿ ಅವರು ಮಾತನಾಡಿ, ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಮೊದಲು ಹತ್ತಿ ಮತ್ತು ಶೇಂಗಾ ಉತ್ಪನ್ನಗಳಿಗೆ ಈ- ಟೆಂಡರ್ ವ್ಯವಸ್ಥೆ ಇತ್ತು. ಈಗ ಮೆಕ್ಕೆಜೋಳ ಸೇರಿದಂತೆ ಇತರೆ ಎಲ್ಲ ಕಾಳು ಕಡಿ ಹುಟ್ಟುವಳಿಗಳನ್ನು ಈ ಟೆಂಡರ್ ಪದ್ದತಿ ಮೂಲಕ ಮಾರಾಟ ಮಾಡಬಹುದು. ಮೆಕ್ಕೆಜೋಳ ಒಣಗಿಸಿ ತರುವುದು ಸೇರಿದಂತೆ ಕ್ರಮಗಳ ಬಗ್ಗೆ ಈಗಗಾಲೇ ಕರಪತ್ರಗಳನ್ನು ಮುದ್ರಿಸಿ ಜಾಗೃತಿ ಮೂಡಿಸಲಾಗಿದೆ ಎಂದರು.

ಮೆಕ್ಕೆಜೋಳ ಇ- ಟೆಂಡರ್ ಖರೀದಿ ಪ್ರಕ್ರಿಯೆ ಚಾಲನೆ ದೊರೆತಿದ್ದು ಸೋಮವಾರ ಮೊದಲ ದಿನವೇ ಮೆಕ್ಕೆಜೋಳಕ್ಕೆ ಕ್ವಿಂಟಲ್ಗೆ ₹ 2015 ಗರಿಷ್ಠ ಧಾರಸಣೆ ಸಿಕ್ಕಿದ್ದು ರೈತರಲ್ಲಿ ಮಂದಹಾಸ ಮೂಡಿಸಿದೆ ಎಂದರು.

ಸಹ ಕಾರ್ಯದರ್ಶಿ ಪರಮೇಶ್ವರ ನಾಯಕ, ಉಮಾಪತಿ ಹೊನ್ನಾಳಿ, ಹಮಾಲರ ಸಂಘದ ಅಧ್ಯಕ್ಷ ಮಲ್ಲೇಶ ಮದ್ಲೇರ, ವರ್ತಕರಾದ ವಿ.ಪಿ.ಲಿಂಗನಗೌಡ್ರ, ವಿರೇಶ ಮೋಟಗಿ, ಜಿ.ಜಿ. ಹೊಟ್ಟಿಗೌಡ್ರ, ಮಾಲತೇಶ ಚಳಗೇರಿ, ಗಣೇಶ ಜಡಮಲಿ, ಮಧು ಕೋಳಿವಾಡ, ಸಿ.ಎಫ್.ಅಜಗಣ್ಣನವರ, ಕರಸಬಪ್ಪ, ಕೊಟ್ರೇಶ, ವಿ.ವಿ. ಹೂಲಿಹಳ್ಳಿ, ಸಿದ್ದಪ್ಪ್ ನಾಗನೂರ, ಸಚಿನ ಲಿಂಗನಗೌಡ್ರ, ಮಾಲತೇಶ ಕುಡಗೋಡಪ್ಪನವರ, ಕಿರಣ ಪಾಟೀಲ, ಇಕ್ಬಾಲ್ ರಾಣೆಬೆನ್ನೂರು, ಎಪಿಎಂಸಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.