ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಉತ್ತರದಲ್ಲಿ ಮಳೆ, ಬೆಳ್ಳುಳ್ಳಿ ದರ ಗಗನಕ್ಕೆ

ಕೆ.ಜಿ. ಈರುಳ್ಳಿ ಬೆಲೆ ₹60
Last Updated 3 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಹಾವೇರಿ: ಉತ್ತರದ ರಾಜ್ಯಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಬೆಳ್ಳುಳ್ಳಿ ಬೆಳೆ ಹಾಳಾಗಿ ಬೆಲೆ ಗಗನಕ್ಕೇರಿದೆ. ನಗರದ ಮಾರುಕಟ್ಟೆಯಲ್ಲಿ ಗುರುವಾರ ಕೆ.ಜಿಗೆ ₹200 ರಂತೆ ಮಾರಾಟವಾಗುತ್ತಿತ್ತು.

ಆವಕ ಕಡಿಮೆಯಾದ ಪರಿಣಾಮ ಮಧ್ಯಪ್ರದೇಶದ ಬೆಳ್ಳುಳ್ಳಿಗೆ ಭಾರಿ ಬೇಡಿಕೆ ಬಂದಿದೆ. ರಾಣೆಬೆನ್ನೂರಿನ ಎಪಿಎಂಸಿ ಮಾರುಕಟ್ಟೆಗೆ ಉತ್ತರ ಭಾಗದಿಂದಲೇ ಆವಕವಾಗುತ್ತಿದೆ.

‘ಸ್ಥಳೀಯವಾಗಿ ಬೆಳ್ಳುಳ್ಳಿ ಬೆಳೆಯುವುದು ಕಡಿಮೆ. ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ ಹಾಗೂ ಮಧ್ಯಪ್ರದೇಶದಿಂದಲೇ ಹೆಚ್ಚಾಗಿ ರಾಣೆಬೆನ್ನೂರು ಎಪಿಎಂಸಿ ಮಾರುಕಟ್ಟೆಗೆ ಬೆಳ್ಳುಳ್ಳಿ ಆವಕ ಆಗುತ್ತದೆ. ಸದ್ಯ ಆ ಭಾಗಗಳಲ್ಲಿ ಮಳೆ ಪ್ರಮಾಣ ಹೆಚ್ಚಿರುವುದರಿಂದ ಬೆಳ್ಳುಳ್ಳಿ ಪೂರೈಕೆ ಕಡಿಮೆಯಾಗಿದೆ’ ಎಂದು ವ್ಯಾಪಾರಿ ರಜಾಕ್‌ಸಾಬ್‌ ಬಾಗಲಕೋಟಿ ಹೇಳಿದರು.

‘ರಾಣೆಬೆನ್ನೂರು ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಬೆಳ್ಳುಳ್ಳಿಗೆ ₹12 ರಿಂದ ₹14 ಸಾವಿರ ಇದೆ. ಬೆಳ್ಳುಳ್ಳಿ ಎಷ್ಟು ಬೇಕಾಗುತ್ತದೆಯೋ, ಅಷ್ಟನ್ನೇಖರೀದಿಸಿ ತರುತ್ತೇವೆ. ಹಿಂದಿನಂತೆ ಕೆಜಿಗಟ್ಟಲೇ ಖರೀದಿಸುವವರ ಸಂಖ್ಯೆ ಕಡಿಮೆ ಇದೆ. ನಾವು 250 ಗ್ರಾಂ ಬೆಳ್ಳುಳ್ಳಿಯನ್ನು ₹50 ರಂತೆ ಮಾರುತ್ತಿದ್ದೇವೆ. ಆದರೆ, ಗ್ರಾಹಕರು ₹30ಕ್ಕೆ ಕೇಳುತ್ತಾರೆ’ ಎಂದು ವ್ಯಾಪಾರಿ ಸುರೇಶಪ್ಪ ಹಾವೇರಿ ಬೇಸರ ವ್ಯಕ್ತಪಡಿಸಿದರು.

‘ಮಾರುಕಟ್ಟೆಗೆ ನಿಂಬೆಹಣ್ಣಿನ ಆವಕ ಹೆಚ್ಚಾಗಿದೆ. 4 ಚಿಕ್ಕ ನಿಂಬೆ ಹಣ್ಣಿಗೆ₹10, ದೊಡ್ಡ ನಿಂಬೆಗೆ ₹20 ರಂತೆ ಮಾರಾಟವಾಗುತ್ತಿದೆ. ಕೆ.ಜಿ.ಶುಂಠಿ ಬೆಲೆ ₹60ಕ್ಕೆ ಏರಿದೆ. ಕಳೆದ ವಾರ ₹60ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿಗೆ ಈ ವಾರವೂ ಅದೇ ದರವಿದೆ. ಟೊಮೆಟೊ ಆವಕ ಹೆಚ್ಚಾಗಿದ್ದರೂ, ₹20 ರಂತೆ ಮಾರಲಾಗುತ್ತಿದೆ. ಉಳಿದ ತರಕಾರಿ ಬೆಲೆ ಹಾಗೂ ಹಣ್ಣಿನ ಬೆಲೆ ಸ್ಥಿರವಾಗಿದೆ’ ಎಂದು ವ್ಯಾಪಾರಿ ಸುಲೇಮಾನ ಹಾಗೂ ಮೆಹಬೂಬಲಿ ದೇವಗಿರಿ ತಿಳಿಸಿದರು.

‘ಈ ವಾರ ಕೆ.ಜಿ ಆಲೂಗಡ್ಡೆ ₹20, ಮೆಣಸಿನಕಾಯಿ ₹30, ಬೆಂಡೆಕಾಯಿ ₹40, ಚವಳಿಕಾಯಿ ₹60, ಸೌತೆಕಾಯಿ ₹40, ಬೀನ್ಸ್‌ ₹40 ರಿಂದ ₹60, ಹಿರೇಕಾಯಿ ₹40, ಹಾಗಲಕಾಯಿ ₹40, ಬದನೆಕಾಯಿ (ಮುಳಗಾಯಿ)₹40, ಡೊಣ್ಣ ಮೆಣಸು ₹40, ಕ್ಯಾಬೇಜ್‌ ₹20, ಹೂಕೋಸು ₹30 ಇದೆ’ ಎಂದು ತರಕಾರಿ ವ್ಯಾಪಾರಿ ಅಬ್ದುಲ್‌ಗನಿ ತಿಳಿಸಿದರು.

‘ಸೇಬು ಕೆ.ಜಿಗೆ ₹100, ಚಿಕ್ಕು ₹60, ಮೊಸಂಬಿ ₹100, ದಾಳಿಂಬೆ ₹100, ಕಿತ್ತಳೆ ₹100, ದ್ರಾಕ್ಷಿ ₹120, ಸೀತಾಫಲ ₹100 ಇದೆ. ಡಜನ್‌ ಏಲಕ್ಕಿ ಬಾಳೆ ₹30, ಪಚ್ಚೆ ಬಾಳೆ ₹40 ಇದೆ’ ಎಂದು ವ್ಯಾಪಾರಿ ದಾವಲ್‌ಸಾಬ್‌ ತಿಳಿಸಿದರು.

* ₹200 ದಾಟಿದ ಬೆಳ್ಳುಳ್ಳಿ ಬೆಲೆ
* ಹಣ್ಣು, ತರಕಾರಿ ಬೆಲೆ ಸ್ಥಿರ
* ಕೆ.ಜಿ ಈರುಳ್ಳಿ ದರ ₹ 60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT