ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಡಿಗೆ ಭಾವೈಕ್ಯ ಸಾರಿದ ಪುಣ್ಯ ಬೀಡು: ಸಂಗನಬಸವ ಸ್ವಾಮೀಜಿ

Published 30 ಜುಲೈ 2023, 14:54 IST
Last Updated 30 ಜುಲೈ 2023, 14:54 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಶಿಗ್ಗಾವಿ: ಪಟ್ಟಣದ ಸಾಲಗೇರಿ ಓಣಿ ದೊಡ್ಡ ಮಸೀದಿಯಲ್ಲಿ ಭಾನುವಾರ ಮೊಹರಂ ಹಬ್ಬದ ಅಂಗವಾಗಿ ಅಲೈದೇವರಿಗೆ ಹಿಂದೂ, ಮುಸ್ಲಿಂ ಸಮುದಾಯದ ಭಕ್ತರು ಪೂಜೆ ಮತ್ತು ಫಾತೆಹಾಖ್ವಾನಿ ಕಾರ್ಯಕ್ರಮ ನಡೆಸಿದರು.

ವಿರಕ್ತಮಠದ ಸಂಗನಬಸವ ಸ್ವಾಮೀಜಿ ಪೂಜೆ ನೆರವೇರಿಸಿದ ನಂತರ ಮಾತನಾಡಿ, ‘ಶಿಶುವಿನಹಾಳದ ಶರೀಫರು, ಗುರುಗೋವಿಂದ ಭಟ್ಟರು, ಕನಕದಾಸರು ನಡೆದಾಡಿದ ಪುಣ್ಯ ಭೂಮಿ ಇದು. ಅದರಿಂದಾಗಿ ಪರಂಪರಾಗತವಾಗಿ ಭಾವೈಕ್ಯ, ಸೌಹಾರ್ದದ ನಾಡು ಎಂದು ಜಗತ್ತಿಗೆ ಪ್ರಚಾರ ಪಡೆದಿದೆ’ ಎಂದರು.

ಕರ್ನಾಟಕ ರಾಜ್ಯ ಕಾರ್ಮಿಕರ ವಿಕಾಸ ವೇದಿಕೆಯ ರಾಜ್ಯ ಗೌರವಾಧ್ಯಕ್ಷ ಲಿಲಾನಿ ಜಂಗ್ಲಿ, ಇಮಾಮ ಹುಸೇನ ಆದಮಬಾಯಿ, ಪುರಸಭೆ ಸದಸ್ಯರಾದ ದಯಾನಂದ ಅಕ್ಕಿ, ಪ್ರಶಾಂತ ಬಡ್ಡಿ, ಮುತ್ತು ಯಲಿಗಾರ, ಫಕ್ಕೀರೇಶ ಯಲಿಗಾರ, ಅಸ್ಕರಲಿ ಮುಕ್ಕೆರಿ, ಮಖಬಲ್ ಅಹ್ಮದ ಗುಜ್ಜರ್, ಅಬ್ದುಲ್ ರಶೀದ್ ಸಾಲಗೆರಿ, ರಭ್ಬಾನಿ ಗೊಟಗೋಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT