ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಹಾವೇರಿ | ನಮ್ಮೂರ ಜಾತ್ರೆ: ಇಂದಿನಿಂದ ಫಲಪುಷ್ಪ ಪ್ರದರ್ಶನ

Published : 18 ಜನವರಿ 2024, 8:21 IST
Last Updated : 18 ಜನವರಿ 2024, 8:21 IST
ಫಾಲೋ ಮಾಡಿ
Comments
ಚಂದ್ರಯಾನ ಕಲಾಕೃತಿಯ ಮೆರುಗು
ಪ್ರತಿವರ್ಷದಂತೆ ಈ ಬಾರಿಯೂ ಹೂವು ಹಣ್ಣು ತರಕಾರಿಗಳಿಂದ ವಿವಿಧ ಕಲಾಕೃತಿಗಳನ್ನು ತಯಾರಿಸಿ ಪ್ರದರ್ಶನ ಮಾಡುತ್ತೇವೆ. ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಚಂದ್ರಯಾನ–3 ಯಶಸ್ವಿ ಉಡಾವಣೆ ಮಾಡಿದ ಅಂಗವಾಗಿ ಚಂದ್ರಯಾನ–3 ಮಿಷನ್‌ ವಿಕ್ರಂ  ಲ್ಯಾಂಡರ್‌ ಮತ್ತು ಇಸ್ರೊ ಸಂಸ್ಥೆಯ ಲೋಗೊ ಕಲಾಕೃತಿಯನ್ನು ಫಲಪುಷ್ಪಗಳಿಂದ ಪ್ರದರ್ಶಿಸಲಿದ್ದೇವೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬರೆಗಾರ ಹೇಳಿದರು. ಪುಷ್ಪ ಗಡಿಯಾರ ಹೂವಿನ ಆನೆ ಗೋಡಂಬಿ ಮಾದರಿಯ ಫೋಟೊ ಫ್ರೇಮ್‌ (ಸೆಲ್ಪಿ ಪಾಯಿಂಟ್‌) ದೀಪಗಳು ಕರ್ನಾಟಕ ನಕ್ಷೆ ಎಲೆ ಮೇಲೆ ಕುಳಿತ ಚಿಟ್ಟೆ ಕಾರಂಜಿ ಬಸವಣ್ಣ ಏಲಕ್ಕಿ ಗಣಪ ಈಶ್ವರ ಲಿಂಗ ಮುಂತಾದ ಕಲಾಕೃತಿಳನ್ನು ಫಲಪುಷ್ಪಗಳಲ್ಲಿ ಅರಳಿಸಿ ಪ್ರದರ್ಶಿಸಲಾಗುವುದು ಎಂದು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT