ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ಪಶು ಚಿಕಿತ್ಸಾಲಯದ ಪ್ರತಿ ಬಿಲ್‌ಗೆ ₹1,200 ಲಂಚದ ಬೇಡಿಕೆ ಇಟ್ಟಿದ್ದ ರಟ್ಟೀಹಳ್ಳಿ ತಾಲ್ಲೂಕು ಉಪ ಖಜಾನೆಯ ಸಹಾಯಕ ಖಜಾನಾಧಿಕಾರಿ ಬಸವರಾಜ ಕಡೇಮನಿ ಮತ್ತು ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಅಮ್ಮಿನಬಾವಿ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹಳ್ಳೂರು ಪಶು ಚಿಕಿತ್ಸಾಲಯದ 5 ಬಿಲ್‌ಗಳನ್ನು ಮಂಜೂರು ಮಾಡಲು ಪಶುವೈದ್ಯಾಧಿಕಾರಿ ಡಾ.ಅಮೃತರಾಜ ಜಿ.ಕೆ. ಅವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಲಿಖಿತ ದೂರು ನೀಡಲಾಗಿತ್ತು.

‘ಒಂದು ಬಿಲ್ ಮಾಡಿಕೊಟ್ಟಿದ್ದಕ್ಕಾಗಿ ಒಂದು ಸಾವಿರ ಲಂಚವನ್ನು ತೆಗೆದುಕೊಳ್ಳುವಾಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ತನಿಖೆ ಮುಂದುವರಿದಿದೆ’ ಎಂದು ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ತಿಳಿಸಿದ್ದಾರೆ.

ರಟ್ಟೀಹಳ್ಳಿ: ಪಟ್ಟಣದ ತಾಲ್ಲೂಕು ಉಪ-ಖಜಾನೆಯ ಸಹಾಯಕ ಖಜಾನಾಧಿಕಾರಿ ಬಸವರಾಜ ಕಡೇಮನಿ, ಹಾಗೂ ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಅಮ್ಮಿನಭಾವಿ ಅವರು ರಟ್ಟೀಹಳ್ಳಿ ತಾಲ್ಲೂಕು ಹಳ್ಳೂರು ಪಶು ಚಿಕಿತ್ಸಾಲಯದ ಬಿಲ್ಲುಗಳನ್ನು ಮಂಜೂರಿಸಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಹಳ್ಳೂರು ಪಶು ವೈದ್ಯಾಧಿಕಾರಿ ಡಾ.ಅಮೃತರಾಜ ಜಿ.ಕೆ. ಲಿಖಿತ ದೂರಿನ ಮೇಲೆ ದಿನಾಂಕ: 17-07-2023ರ ಸೋಮವಾರ ಸಂಜೆ ಹಾವೇರಿ ಲೋಕಾಯುಕ್ತರು ದಾಳಿ ನಡೆಸಿ ರೂ. 1000/- ಲಂಚದ ಹಣವನ್ನು ಪಡೆದುಕೊಳ್ಳುತ್ತಿರುವಾಗ ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದು, ತನಿಖೆ ಮುಂದುವರೆದಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.