ಶನಿವಾರ, ಜುಲೈ 24, 2021
26 °C

ಲಾಕ್‌ಡೌನ್: ಶಿಕ್ಷಕರಿಗೆ ಆನ್‍ಲೈನ್ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಕೋವಿಡ್-19 ಲಾಕ್‍ಡೌನ್ ಕಾರಣ ಶಾಲೆಗಳಿಗೆ ರಜೆಯ ಅವಧಿಯಲ್ಲಿ ಹಾವೇರಿ ತಾಲ್ಲೂಕಿನ ಶಿಕ್ಷಕರಿಗೆ ‘ಶಿಕ್ಷಕರು ಮನೆಯಲ್ಲಿ ಇರಿ ಆನ್ ಲೈನ್ ತರಬೇತಿ ಪಡೆಯಿರಿ’ ಎಂಬ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಡಯಟ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಶಿಕ್ಷಕರಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ, ವ್ಯಕ್ತಿತ್ವ ವಿಕಸನ ಹಾಗೂ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಕುರಿತಾದ ತರಬೇತಿ ಹಾಗೂ ಸಹ ಶಿಕ್ಷಕರಿಗೆ ‘TREE’ (ಟೀಚರ್‌ ರೀಡಿನೆಸ್‌ ಫಾರ್‌ ಎನ್‌ರಿಚ್ಡ್‌ ಎಜುಕೇಷನ್‌) ಮತ್ತು ಮುಖ್ಯೋಪಾಧ್ಯಾರಿಗಾಗಿ ‘MAATA’ (ಮೋಟಿವೇಷನಲ್‌ ಅಕಾಡೆಮಿಕ್‌ ಅಡ್ಮಿನಿಸ್ಟ್ರೇಶನ್‌ ಟ್ರೈನಿಂಗ್‌ ಟು ಅಛೀವ್‌) ಎಂಬ ತರಬೇತಿ ನೀಡಲಾಗುತ್ತಿದೆ.

ಆರಂಭಿಕ ಹಂತವಾಗಿ ಜೂನ್ 10ರವರಗೆ ತಾಲ್ಲೂಕಿನ ಸಂಗೂರ, ಹಾವೇರಿ, ಹೊಸರಿತ್ತಿ ಹಾಗೂ ಗುತ್ತಲ ವಲಯಗಳಾಗಿ ವಿಂಗಡಿಸಿ ನಲಿ-ಕಲಿ ಮತ್ತು ಭಾಷಾ ವಿಷಯಗಳು , ಗಣಿತ. ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಎಲ್ಲ ಶಿಕ್ಷಕರಿಗೆ ಆನ್‍ಲೈನ್ ಮೂಲಕ ತರಬೇತಿ ನೀಡಲಾಗುವುದು. ಈ ಉದ್ದೇಶಕ್ಕಾಗಿ ವಾಟ್ಸ್‌ ಆ್ಯಪ್‌ ಗುಂಪುಗಳನ್ನು ರಚಿಸಲಾಗಿದೆ.

ತರಬೇತಿ ಆಯೋಜಿಸುವ ಮುನ್ನವೆ ಬಿ.ಆರ್.ಸಿ.ಯಿಂದ ವಿಷಯವಾರು ಸಂಪನ್ಮೂಲ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್.ಭಗವಂತಗೌಡ್ರ ಅವರ ನೇತೃತ್ವದಲ್ಲಿ ಝೂಮ್, ವೆಬೆಕ್ಸ್, ಗೂಗಲ್‍ಮೀಟ್, ಹ್ಯಾಂಗ್ ಔಟ್ ಆ್ಯಪ್‍ಗಳನ್ನು ಬಳಸಿಕೊಂಡು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಲ್ಲೂಕಿನಾದ್ಯಂತ ಒಟ್ಟು 902 ಸರ್ಕಾರಿ ಶಿಕ್ಷಕರಿದ್ದು ಬಿ.ಆರ್.ಸಿ., ಪಿ.ಈ.ಓ., ಈ.ಸಿ.ಓ., ಬಿ.ಆರ್.ಪಿ., ಬಿ.ಐ.ಆರ್.ಟಿ. ಸಿಬ್ಬಂದಿಗಳ ಮೇಲುಸ್ತುವಾರಿಯಲ್ಲಿ ಪ್ರತಿದಿನ ಆನ್ ಲೈನ್ ತರಬೇತಿಗಳು ಯಶಸ್ವಿಯಾಗಿ ನಡೆಸಲಾಗುತ್ತಿದೆ. ತರಬೇತಿಯಲ್ಲಿ ಪಾಲ್ಗೊಂಡ ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ, ಡಯಟ್ ಪ್ರಾಚಾರ್ಯ ಬಸವಲಿಂಗಪ್ಪ ಜಿ.ಎಂ.,  ಹಾವೇರಿ ತಾಲ್ಲೂಕಿನ ಶಿಕ್ಷಣ ಇಲಾಖೆಯ ಶೈಕ್ಷಣಿಕ ಚಟುವಟಿಕೆಗಳ ನೋಡಲ್ ಅಧಿಕಾರಿಗಳು ಮತ್ತು ಡಯಟ್‌ ಉಪನ್ಯಾಸಕರಾದ ಹುಚ್ಚಣ್ಣವರ ಮತ್ತು ಕಮಲಾ ಅವರು ತರಬೇತಿಯಲ್ಲಿ ಭಾಗವಹಿಸಿ ಶಿಕ್ಷಕರಿಗೆ ಮಾರ್ಗದರ್ಶನ ಸಹ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.