ಬುಧವಾರ, ಜನವರಿ 19, 2022
23 °C

‘ಹಾವೇರಿಯಾಂವ್‌’ ಕೃತಿಗೆ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ಪತ್ರಕರ್ತ, ಸಾಹಿತಿ ಮಾಲತೇಶ ಅಂಗೂರ ಅವರ ಅಂಕಣಬರಹಗಳ ‘ಹಾವೇರಿಯಾಂವ್’ ಕೃತಿ ‘ಎನ್.ಎಸ್. ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿಗೆ’ ಆಯ್ಕೆಯಾಗಿದೆ.

ಬಾನುಲಿ ಹಾಗೂ ರಂಗಭೂಮಿಗಳ ನಟ ಹಾಗೂ ನಿರ್ದೇಶಕ ಎನ್.ಎಸ್. ವಾಮನ್ ಅವರ ಶತಮಾನೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ‘ಅಭಿರುಚಿ ಬಳಗ’ ಹಾಗೂ ‘ಆಸಕ್ತಿ ಪ್ರಕಾಶನ’ ‘ಎನ್.ಎಸ್.ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಿತ್ತು.

ರಾಜ್ಯದ ವಿವಿಧ ಲೇಖಕರ 46 ಕೃತಿಗಳು ಪ್ರಶಸ್ತಿಗೆ ಬಂದಿದ್ದವು. ಅವುಗಳಲ್ಲಿ ‘ಹಾವೇರಿಯಾಂವ್’ ಕೃತಿಗೆ ಮೂರನೇ ಬಹುಮಾನ ಲಭಿಸಿದೆ. 2022ರ ಜನವರಿ 2ರಂದು ಮೈಸೂರಿನಲ್ಲಿ ಪುಸ್ತಕ ಪ್ರಶಸ್ತಿ ಪದಾನ ಮಾಡಲಾಗುವುದು ಎಂದು ಅಭಿರುಚಿ ಪ್ರಕಾಶನದ ಎನ್.ವಿ.ರಮೇಶ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು