ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Last Updated 24 ಜೂನ್ 2018, 17:37 IST
ಅಕ್ಷರ ಗಾತ್ರ

ಸವಣೂರ: ಪಟ್ಟಣದ ನವನಗರ ನಿರ್ಮಾಣವಾಗಿ ಸುಮಾರು 20 ವರ್ಷ ಗತಿಸಿದರೂ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿ ತಹಶೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿಗಳ ನಿವಾಸದ ಎದುರು ಸಮಾಜ ಪರಿವರ್ತನ ಪಾರ್ಟಿ ಅಧ್ಯಕ್ಷ ಮಹದೇವ ಮಹೇಂದ್ರಕರ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದೆ.

ಮೂಲ ಸೌಲಭ್ಯವನ್ನು ಪುರಸಭೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಸಾರ್ವಜನಿಕರಿಗೆ ನೀಡುವಲ್ಲಿ ಹಿಂದೆಟು ಹಾಕುತ್ತಿದೆ. ಸಮರ್ಪಕ ಸೌಲಭ್ಯವನ್ನು ನೀಡಬೇಕು ಎಂದು ಹಲವು ಭಾರಿ ಮನವಿ ಸಲ್ಲಿಸಿದರು ಕೂಡಾ ಕ್ರಮಕೈಗೊಳ್ಳದೆ ಉದಾಸೀನ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೆ.ಸಿ.ರಾಶಿನಕರ, ಮಂಜುನಾಥ ಬೆಣ್ಣಿ, ಅಮರನಾಥ ಮಹೇಂದ್ರಕರ, ಮಾರುತಿ ರಾಶಿನಕರ, ಅಪ್ಪಣ್ಣ ಮಹೇಂದ್ರಕರ, ಎಂ. ವಿ.ಗಿತ್ತೆ, ರಾಮು ಗಿತ್ತೆ, ಉಮೇಶ ಮುಂಜೋಜಿ, ಎನ್.ಜಿ.ಬಾಳಿಕಾಯಿ, ಮುರಳಿದರ ಎ.ಎಂ, ವೆಂಕಟೇಶ ಕುರ್ಡೆಕರ, ಎಂ.ಆರ್.ಹಾವಣಗಿ, ಶ್ರೀನಿವಾಸ ಗಿತ್ತೆ, ಈರಯ್ಯ ಹಿರೇಮಠ, ಮಂಜು ಸಿಂದಗಿ, ಸಂಜೀವ ಜವಳಿ, ಗಣೇಶ ಆಪ್ಟೆ, ಮುರಳಿ ಮಹೇಂದ್ರಕರ, ನಂದೀಶ ಹಾವಣಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT