ಸೋಮವಾರ, ಜೂನ್ 27, 2022
21 °C
ರಾಣೆಬೆನ್ನೂರು: ಅಂಜುಮನ್‌ ಎ ಸಂಸ್ಥೆಯ ಕೊಡುಗೆ

ರಾಣೆಬೆನ್ನೂರು: ಕ್ವಾರಂಟೈನ್ ಕೇಂದ್ರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ನಗರದ ಆಂಗ್ಲೋ ಉರ್ದು ಪ್ರೌಢಶಾಲೆ ಆವರಣದಲ್ಲಿ ಅಂಜುಮನ್‌ ಎ ಸಂಸ್ಥೆಯಲ್ಲಿ ಆರಂಭಿಸಿರುವ 50 ಹಾಸಿಗೆಯ ಕ್ವಾರಂಟೈನ್ ಕೇಂದ್ರವನ್ನು ಸಚಿವ ಆರ್‌.ಶಂಕರ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಉದ್ಘಾಟಿಸಿದರು.

ಶಂಕರ್‌ ಮಾತನಾಡಿ, ಅಂಜುನಮ್‌ ಎ ಇಸ್ಲಾಂ ಸಮಿತಿಯಿಂದ ಕ್ವಾರಂಟೈನ್‌ ಕೇಂದ್ರ ಆರಂಭಿಸಿದ್ದು ಸ್ವಾಗತಾರ್ಹ. ಇದರಿಂದ ನಗರ ಜನೆತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ತಾಲ್ಲೂಕಿನ ಮೇಡ್ಲೇರಿ ಮತ್ತು ತುಮ್ಮಿನಕಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಎರಡು ಮತ್ತು ಈ ಅಂಜುಮನ್‌ ಸಂಸ್ಥೆಗೆ ನನ್ನ ಅನುದಾನದಲ್ಲಿ ಒಂದು ಆಂಬುಲೆನ್ಸ್‌ ಖರೀದಿಸಲು ಜಿಲ್ಲಾಡಳಿತಕ್ಕೆ ಆದೇಶ ಪತ್ರ ನೀಡಿದ್ದೇನೆ ಎಂದರು.

ಪ್ರಕಾಶ ಕೋಳಿವಾಡ ಮಾತನಾಡಿ, ನಮ್ಮ ಪಿಕೆಕೆ ಇನಿಶಿಯೇಟಿವ್ಸ್‌ ನಿಂದ ಸರ್ಕಾರಿ ಆಸ್ಪತ್ರೆಗೆ ಒಂದು ಆಮ್ಲಜನಕ ವಾಹನ ನೀಡಲಾಗಿದ್ದು, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 50 ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎಂದರು.

ಯುವ ಮುಖಂಡ ಇರ್ಫಾನ್‌ ದಿಡಗೂರ ಅವರು ಕ್ವಾರಂಟೈನ್‌ ಬಗ್ಗೆ ಮಾಹಿತಿ ನೀಡಿದರು. ಪಿಎಫ್‌ಐ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಫಜರುಲ್ಲಾ ಹಾಗೂ ಶೋಯೋಬ್‌ ಅವರನ್ನು ಸನ್ಮಾನಿಸಲಾಯಿತು.

ಡಾ. ಮನೋಜ ಸಾವುಕಾರ, ಡಾ. ವಿನಾಯಕ ಹಿರೇಗೌಡ್ರ, ಡಾ. ಅಭಿನಂದನ ಸಾಹುಕಾರ ಅವರು ಹಾಗೂ ಡಾ. ಜುಬೈರ್‌ ಐರಣಿ, ಡಾ.ಶಫತ್ತುಲ್ಲಾ ಕೆಂಗೊಂಡ, ಡಾ. ಅಪ್ರೋಜ್‌ ಐರಣಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ ಎಂದರು.

ಅಂಜುಮನ್‌ ಸಂಸ್ಥೆ ಆಡಳಿತಾಧಿಕಾರಿ ಅಮಾನುಲ್ಲಾ ಸಾಬ್‌ ಹಾವೇರಿ, ಮಸ್ತಾಕ್‌ ಕ್ಯಾಲಕೊಂಡ, ಜಾಮಾಲುದ್ದೀನ ಜಮ್ಮಣ್ಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು