ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಪೇಂದ್ರ ರೆಡ್ಡಿ ಆಯ್ಕೆ ಸ್ಪಷ್ಟ: ಬಸವರಾಜ ಬೊಮ್ಮಾಯಿ

Published 25 ಫೆಬ್ರುವರಿ 2024, 16:01 IST
Last Updated 25 ಫೆಬ್ರುವರಿ 2024, 16:01 IST
ಅಕ್ಷರ ಗಾತ್ರ

ಸವಣೂರು: ‘ರಾಜ್ಯಸಭೆ ಚುನಾವಣೆ ಬಿಜೆಪಿ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಆಯ್ಕೆಯಾಗುವ ವಿಶ್ವಾಸವಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಮಾತನಾಡಿದ ಅವರು,  ‘ಬಿಜೆಪಿ ಶಾಸಕರ ಸಂಖ್ಯೆ 66 ಇದೆ. ಜೆಡಿಎಸ್ ನಿಂದ 19 ಜನ ಶಾಸಕರ ಸಂಖ್ಯೆ ಇದೆ. ರಾಜ್ಯ ಸಭೆಯ ಒಂದು ಸ್ಥಾನಕ್ಕೆ ಬೇಕಾಗುವ ಶಾಸಕರ ಸಂಖ್ಯೆ ಮೀರಿ 40 ಶಾಸಕರ ಸಂಖ್ಯೆ ಹೆಚ್ಚಿದೆ’ ಎಂದರು.

‘ಆದಾಗ್ಯೂ ಕಾಂಗ್ರೆಸ್ ನವರ ಗುಂಪುಗಾರಿಕೆಯಿಂದ ಕ್ರಾಸ್ ಓಟಿಂಗ್ ಆಗೋ ಭಯದಿಂದ ರೆಸಾರ್ಟ್ ರಾಜಕಾರಣ ಮಾಡ್ತಾ ಇದ್ದಾರೆ. ಡಿಕೆಶಿ ಕೂಡ ಅವರ ಪ್ರಭಾವ ಬೀರುತ್ತಿದ್ದಾರೆ’ ಎಂದು ದೂರಿದರು.

‘ಹಾವೇರಿ - ಗದಗ ಲೋಕಸಭಾ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಸ್ಪರ್ಧಿಸುವ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡಲಿದ್ದಾರೆ’ ಎಂದರು.

‘ಸವಣೂರು ತಹಶಿಲ್ದಾರರ ಕಚೇರಿ ಡಿಜಟಲೀಕರಣ ಮಾಡುವುದಾಗಿ ಸರ್ಕಾರ ಹೇಳಿದೆ. ಹಾಗೆ ಮಾಡಿದರೆ ಎಲ್ಲವೂ ಸರಿಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT