ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಣ್ಣ ಒಂದು ಜಾತಿಗೆ ಸೀಮಿತವಾಗದಿರಲಿ: ಬಿ.ಸಿ.ಪಾಟೀಲ

ಸಂಗೊಳ್ಳಿ ರಾಯಣ್ಣನ ಪುತ್ಥಳಿ ಲೋಕಾರ್ಪಣೆ:
Last Updated 14 ಮಾರ್ಚ್ 2023, 16:10 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ರಾಷ್ಟ್ರಭಕ್ತ ಸಂಗೊಳ್ಳಿ ರಾಯಣ್ಣ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ತ್ಯಾಗ– ಬಲಿದಾನವನ್ನು ಎಲ್ಲರೂ ಸ್ಮರಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ರಟ್ಟೀಹಳ್ಳಿ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿಯನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕೆಲ ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು ಪಾಕಿಸ್ತಾನವನ್ನು ಬೆಂಬಲಿಸುತ್ತಿರುವುದು ರಾಷ್ಟ್ರದ್ರೋಹ ಎಂದರು.

ಸಂಗೊಳ್ಳಿ ರಾಯಣ್ಣನ ಮೆರವಣಿಗೆಗೆ ಕಲ್ಲುತೂರಿ ಅಡ್ಡಿ ಉಂಟುಮಾಡಿರುವುದು ಖಂಡನೀಯ. ನಾವೇನು ಪಾಕಿಸ್ತಾನದಲ್ಲಿದ್ದೇವೆಯೇ? ಅಂತಹ ರಾಷ್ಟ್ರದ್ರೋಹಿಗಳನ್ನು ರಕ್ಷಿಸುವ ರಾಜಕೀಯ ಪಕ್ಷಗಳು ಇವೆ. ಕೇವಲ ಮತಕ್ಕಾಗಿ, ಅಧಿಕಾರಕ್ಕಾಗಿ ವೋಟ್‌ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಬಂದ ಗತಿ ಭಾರತಕ್ಕೆ ಬರುವುದು ಬೇಡ. ಭಾರತಾಂಬೆಯ ಘನತೆ, ಗೌರವ ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದರು.

ಈ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮಾತನಾಡಿ, ರಟ್ಟೀಹಳ್ಳಿ- ಹಿರೇಕೆರೂರ ಕ್ಷೇತ್ರವನ್ನು ಬಿ.ಸಿ.ಪಾಟೀಲ ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. ನನ್ನ ಖಾತೆಗೆ ಸಂಬಂಧಿಸಿದಂತೆ ರಟ್ಟೀಹಳ್ಳಿ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಹಾಗೂ ಒಳಚರಂಡಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ್ದೇನೆ. ಮತ್ತೊಮ್ಮೆ ಪಾಟೀಲರನ್ನು ಈ ಕ್ಷೇತ್ರದ ಜನತೆ ಆಯ್ಕೆ ಮಾಡಬೇಕು ಎಂದರು.

ಹಾರಿಕಾ ಮಂಜುನಾಥ ಸಂಗೊಳ್ಳಿ ರಾಯಣ್ಣ ಹಾಗೂ ಹಿಂದೂ ಧರ್ಮ ಸಂರಕ್ಷಣೆಯ ಕುರಿತು ಮಾತನಾಡಿದರು. ಮುಖಂಡರಾದ ಟಿ.ಬಿ. ಬಳಗಾವಿ, ಆರ್.ಎನ್. ಗಂಗೋಳ, ಮಾಲತೇಶ ಬೆಳಕೇರಿ, ಆನಂದಪ್ಪ ಹಾದಿಮನಿ, ರಾಜು ಬಟ್ಲಕಟ್ಟಿ, ಬಸವರಾಜ ಆಡಿನವರ, ದೊಡ್ಡಗೌಡ ಪಾಟೀಲ ಎಸ್.ಎಸ್. ಪಾಟೀಲ, ಶಂಭಣ್ಣ ಗೂಳಪ್ಪನವರ, ಗಣೇಶ ವೇರ್ಣೇಕರ, ರವಿಶಂಕರ ಬಾಳಿಕಾಯಿ, ಮಾಲತೇಶ ಗಂಗೋಳ, ಲಿಂಗರಾಜ ಚಪ್ಪರದಹಳ್ಳಿ ,ಮಾಲತೇಶ ಬೆಳಕೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT