ಗುರುವಾರ , ಜೂನ್ 17, 2021
29 °C

ರಾಯಣ್ಣ ಪ್ರತಿಮೆ ತೆರವಿಗೆ ಹಾವೇರಿ ಕುರುಬರ ಸಂಘದಿಂದ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿರುವುದು ಖಂಡನಾರ್ಹ. ಪುನಃ ಅಲ್ಲಿಯೇ ಪ್ರತಿಮೆ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಹಾವೇರಿ ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳು ಮಂಗಳವಾರ ದೇವಗಿರಿಯ ಜಿಲ್ಲಾಡಳಿತ ಭವನದ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. 

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನ ಪ್ರತಿಮೆ ತೆರವುಗೊಳಿಸಿ ಅಪಮಾನ ಮಾಡಲಾಗಿದೆ. ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಶತಮಾನಗಳಿಂದ ಇದೆ. ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಮಾಡುವ ಸಂದರ್ಭದಲ್ಲಿ ತಾತ್ಕಾಲಿಕವಾಗಿ ತೆರವುಗೊಳಿಸಿರಬಹುದು. ಆದರೆ ಕ್ಷುಲ್ಲಕ ಕಾರಣ ನೀಡಿ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಕುಂಟು ನೆಪ ಹೇಳುತ್ತಿರುವುದು ಖಂಡನೀಯ ಎಂದು ಮನವಿಯಲ್ಲಿ ಒತ್ತಾಯಿಸಿದೆ. 

ಮುಖಂಡರಾದ ಎಚ್.ಬಿ.ಗಾಜಿಗೌಡ್ರ, ಬಸಣ್ಣ ಕಂಬಳಿ, ಈರಪ್ಪ ಲಮಾಣಿ, ರಮೇಶ ಶಿವಣ್ಣನವರ, ಫಕ್ಕೀರಪ್ಪ ಕುಂದೂರ, ಪಿ.ಎಸ್.ಮಜ್ಜಗಿ. ನಿಂಗಪ್ಪ ಗಾಜಿಯವರ, ಮಾಲತೇಶ ಬಣಕಾರ, ಕೆ.ಡಿ.ತೋಟಗೇರ,ನಿಂಗಪ್ಪ ಸಣ್ಣಕ್ಕಿ, ಫಕ್ಕೀರಪ್ಪ ಬರಡಿ, ಶಿವಾನಂದ ಮಾಳಿ, ಶಿವಾನಂದ ಕರಿಗಾರ, ಪೂರ್ಣೇಶ ಪೂಜಾರ, ಎಮ್.ಸಿ.ಆಲದಕಟ್ಟಿ, ವಿನಾಯಕ ಕುರುಬರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು