ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹೋರಾತ್ರಿ ರೇಣುಕಾ ಯಲ್ಲಮ್ಮ ರಥೋತ್ಸವ

Last Updated 16 ಅಕ್ಟೋಬರ್ 2021, 14:23 IST
ಅಕ್ಷರ ಗಾತ್ರ

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ದಸರಾ ಅಂಗವಾಗಿ ಪೇಟೆ ರೇಣುಕಾ ಯಲ್ಲಮ್ಮ ದೇವಿ ರಥೋತ್ಸವ ಭಕ್ತ ಸಮೂಹದ ನಡುವೆ ಸಡಗರ ಸಂಭ್ರಮದಿಂದ ಶುಕ್ರವಾರ ಅಹೋರಾತ್ರಿ ಜರುಗಿತು.

ಮಾಗಿಕೆರಿ ಬೀರಲಿಂಗೇಶ್ವರ ಬಂಡಿ ಸಾಗಿದ ನಂತರ ಅರಳೆಲೆಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ಪೇಟೆ ರೇಣುಕಾ ಯಲ್ಲಮ್ಮದೇವಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ‘ಪರಂಪರಾಗತವಾಗಿ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಇಂದಿಗೂ ಅನುಸರಿಸಿಕೊಂಡು ಬರುತ್ತಿರುವುದು ಶ್ಲಾಘನಿಯ’ ಎಂದರು.

ರಥಕ್ಕೆ ಮಹಿಳೆಯರು, ಮಕ್ಕಳು ಹಣ್ಣು, ಕಾಯಿ, ಉತ್ತುತ್ತೆ ಹಾಗೂ ಹೂ ಮಾಲೆಗಳಿಗಳಿಂದ ವಿಶೇಷ ಪೂಜೆ ಸಲ್ಲಿಸಿದರು. ಓಣಿಗಳಲ್ಲಿ ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಲಾಗಿತು.

ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಯೋಗದಲ್ಲಿ ಕಲ್ಲಮುಳಗುಂದದ ಮಾರುತಿ ಭಜನಾ ಸಂಘದ ಕೋಲಾಟ, ಬಾಳಂಬೀಡದ ಬ್ಯಾಡ್ ಕಂಪನಿ, ಹೊನ್ನಾಳ್ಳಿಯ ಕುದರಿ ಕುಣಿತ, ಶಿಗ್ಗಾವಿ ಡೊಳ್ಳು ಮೇಳ, ನಾರಾಯಣಪುರದ ಶಹನಾಯಿ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ರುದ್ರಾಣಿ ಮಹಿಳಾ ಬಳಗದಿಂದ ರುದ್ರಪಠಣ, ಶಿರಡಿ ಸಾಯಿ ಸೇವಾ ಸಮಿತಿ, ಪಂಚಾಚಾರ್ಯ ಸಂಘ, ಬಂಗಾರ ಬಸವಣ್ಣ ಸಮಿತಿ, ಸುಂಕದಕೇರಿ ರೇವಣಸಿದ್ದೇಶ್ವರ ಸಮಿತಿಯಿಂದ ಭಜನಾ ಕಾರ್ಯಕ್ರಮಗಳು, ಜಾನಪದ ಕಲಾವಿದ ಗುರುರಾಜ ಚಲವಾದಿ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮಗಳು, ನಿತ್ಯ ಹೋಮ, ಹವನಗಳು ಮತ್ತು ಆಯುಧ ಪೂಜೆ, ಬಂಡಿಪೂಜೆ, ಸಾಮೂಹಿಕ ಬನ್ನಿ ಮುಡಿಯುವುದು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

ಪೇಟೆ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಸಪ್ಪ ಸೊಪ್ಪಿನ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ನರಸಿಂಗ್ ಪುಕಾಳೆ, ನೀಲಕಂಠಪ್ಪ ನರೇಗಲ್, ಚಂದ್ರು ಕೋರಿ, ರವಿ ಕುರಗೋಡಿ, ರಾಮಣ್ಣ ಕುರಗೋಡಿ, ಮೌನೇಶ ಕುರಗೋಡಿ, ಬಸವಂತಪ್ಪ ಕೊಟಬಾಗಿ, ನಿಂಗಪ್ಪ ಕೋರಿ, ಮಹೇಶ ಪುಕಾಳೆ, ಉಮೇಶ ಮಾಳಗಿಮನಿ, ಮೋಹನ ಮಂಗಳಾರತಿ, ದೀಪಕ್ ಪುಕಾಳೆ, ನಾಗರಾಜ ಹಂಜಗಿ, ರವಿ ಮಾಳಗಿಮನಿ, ರಮೇಶ ಮಾಳಗಿಮನಿ, ನಾಗರಾಜ ಸಿದ್ದಣ್ಣವರ, ರಾಜು ಕುಂದಗೋಳ, ದೇವಪ್ಪ ಹಳವಳ್ಳಿ, ಯಲ್ಲಪ್ಪ ಸಿಂಗಪೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT