ಮಂಗಳವಾರ, ಏಪ್ರಿಲ್ 20, 2021
24 °C
ಚುನಾವಣಾ ಕರ್ತವ್ಯ ವೇಳೆ ಮೃತಪಟ್ಟಿದ್ದ ಇಬ್ಬರು ಗ್ರಾಮ ಸಹಾಯಕರು

ಹಾವೇರಿ: ಸಂತ್ರಸ್ತರ ಕುಟುಂಬಕ್ಕೆ ₹ 15 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಚುನಾವಣಾ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮರಣ ಹೊಂದಿದ ಹಾನಗಲ್‌ ತಾಲ್ಲೂಕಿನ ತುಮರಿಕೊಪ್ಪದ ಗ್ರಾಮ ಸಹಾಯಕ ಸುರೇಶ ತಳವಾರ ಮತ್ತು ಚಿಕ್ಕಹುಲ್ಲಾಳದ ಗ್ರಾಮ ಸಹಾಯಕ ಉಡಚಪ್ಪ ದೊಡ್ಡಮನಿ ಅವರ ಕುಟುಂಬಗಳಿಗೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತದಿಂದ ತಲಾ ಕುಟುಂಬಕ್ಕೆ ₹ 15 ಲಕ್ಷ ಪರಿಹಾರವನ್ನು ನೀಡಲಾಗಿದೆ. 

ಸುರೇಶ ತಳವಾರ ಮತ್ತು ಉಡಚಪ್ಪ ದೊಡ್ಡಮನಿ ಈ ಇಬ್ಬರನ್ನು ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಅವಶ್ಯವಿರುವ ವಿದ್ಯುನ್ಮಾನ ಮತಯಂತ್ರಗಳನ್ನು ಹಾವೇರಿ ಜಿಲ್ಲೆಯಿಂದ ಬೆಳಗಾವಿ ಜಿಲ್ಲೆಗೆ ಒದಗಿಸಲು ನಿಯೋಜಿಸಲಾಗಿತ್ತು. 2020ರ ನವೆಂಬರ್‌ 17ರಂದು ಕರ್ತವ್ಯ ನಿರ್ವಹಿಸಿ, ತಮ್ಮ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೀಡಾಗಿ ಇಬ್ಬರೂ ಮೃತಪಟ್ಟಿದ್ದರು. 

ಈ ಕುರಿತು, ಚುನಾವಣಾ ಆಯೋಗಕ್ಕೆ ಜಿಲ್ಲಾಡಳಿತದಿಂದ ಪತ್ರ ಬರೆದು, ಮೃತರ ಕುಟುಂಬದವರಿಗೆ ಪರಿಹಾರ ನೀಡಲು ಕೋರಲಾಗಿತ್ತು. ಅದರಂತೆ ಚುನಾವಣಾ ಆಯೋಗ ಪರಿಹಾರ ನೀಡಲು ನಿರ್ದೇಶನ ನೀಡಿತು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು