ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಮುಸ್ಲಿಮರ ಓಲೈಕೆ: ಜೋಶಿ ಆರೋಪ

Published 27 ಏಪ್ರಿಲ್ 2024, 15:25 IST
Last Updated 27 ಏಪ್ರಿಲ್ 2024, 15:25 IST
ಅಕ್ಷರ ಗಾತ್ರ

ಶಿಗ್ಗಾವಿ: ದೇಶ ಸುರಕ್ಷಿತ ಮತ್ತು ಸುಭದ್ರತೆಗೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ಕಾರಣ. ಹೀಗಾಗಿ ದೇಶದ ಜನ ಬಿಜೆಪಿಗೆ ಬೆಂಬಲಿಸುವ ಮೂಲಕ ಬಹುಮತ ನೀಡಲಿದ್ದಾರೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶನಿವಾರ ನಡೆದ ಮತಯಾಚನೆ ಕಾರ್ಯಕ್ರಮದಲ್ಲಿ  ಮಾತನಾಡಿದರು

ಎಲ್ಲ ಹಳ್ಳಿಗಳಿಗೆ ಡ್ರೋನ್ ಕೊಟ್ಟು ಆ ಡ್ರೋನ್ ನಡೆಸಲು ಮಹಿಳೆಯರಿಗೆ ತರಬೇತಿ ಕೊಡಲಾಗುತ್ತಿದೆ. ಕೃಷಿ ಸಮ್ಮಾನ್ ನಿಧಿ ಯೋಜನೆ, ಆಯುಷ್ಮಾನ್ ಯೋಜನೆ ಮಾಡಲಾಗಿದೆ. ಜನತೆಗೆ ಹೊರೆಯಾಗದ ರೀತಿಯ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ದರಗಳನ್ನ ಏರಿಸಿ ಜನತೆಗೆ ಗ್ಯಾರಂಟಿಗಳ ನೆಪ ಹೇಳಿ ಒಬ್ಬರಿಂದ ಕಸಿದು ಇನ್ನೊಬ್ಬರಿಗೆ ಕೊಡುವ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸುವ ಕಾರ್ಯ ಮಾಡುತ್ತಿದ್ದು, ಹುಬ್ಬಳ್ಳಿಯ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯ ಬರ್ಬರ ಹತ್ಯೆ ಮಾಡುವಷ್ಟು ಧೈರ್ಯ ಅವರಿಗೆ ಬರುವಂತೆ ಮಾಡಿದ್ದಾರೆ. ಹೀಗಾಗಿ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ.  ಜೀವನದ ಭದ್ರತೆಯನ್ನು ಕೊಡುವ ಏಕೈಕ ನಾಯಕ ಮೋದಿ ಎಂದರು.

ಬೊಮ್ಮಾಯಿಯವರು ಈ ಕ್ಷೇತ್ರದ ಶಾಸಕರಿದ್ದರು. ಅವರೂ ಈಗ ಹಾವೇರಿ- ಗದಗ ಲೋಕಸಭಾ ಅಭ್ಯರ್ಥಿ ಆಗಿರುವುದರಿಂದ ಇನ್ನು ಮುಂದೆ ಇಲ್ಲಿಯ ಕೆಲಸ ಕಾರ್ಯಗಳಿಗೆ ನೆರವಾಗುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಇದಕ್ಕೂ ಪೂರ್ವದಲ್ಲಿ ಕುರುಬ ಸಮಾಜ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಜೋಶಿ ಅವರನ್ನು ಸನ್ಮಾನಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಗಂಗಣ್ಣ ಸಾತಣ್ಣನವರ, ಶಿವಪ್ರಸಾದ ಸುರಗೀಮಠ, ತಿಪ್ಪಣ್ಣ ಸಾತಣ್ಣನವರ, ನರಹರಿ ಕಟ್ಟಿ, ಶಿವಾನಂದ ಸೊಬರದ, ಶ್ರೀಕಾಂತ್ ಬಳ್ಳಕ್ಕನವರ, ನಿವೃತ್ತ ಸೈನಿಕ ಪರಶುರಾಮ ದಿವಾನರ, ಮಲ್ಲೇಶಪ್ಪ ಹರಿಜನ, ಕರೆಪ್ಪ ಕಟ್ಟಿಮನಿ,  ಮುಖಂಡರು, ಕಾರ್ಯಕರ್ತರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT