ಶಿಗ್ಗಾವಿ: ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುವ ನಿಟ್ಟಿನಲ್ಲಿ ₹4 ಕೋಟಿ ವೆಚ್ಚದಲ್ಲಿ ಸವಣೂರ 220 ಕೆವಿ ಗ್ರಿಡ್ನಿಂದ ಹುಲಗೂರ 33 ಕೆವಿ ವಿದ್ಯುತ್ ಗ್ರಿಡ್ಗೆ ವಿದ್ಯುತ್ ಸಂಪರ್ಕ ಜೋಡಣೆ ಕಾಮಗಾರಿ ಕೈಗೊಳ್ಳುವ ಮೂಲಕ ಈ ಭಾಗದ ರೈತರಿಗೆ ಸಾಮಾಜಿಕ ನ್ಯಾಯ ನೀಡಿದಂತಾಗುತ್ತಿದೆ ಎಂದು ಹೆಸ್ಕಾಂ ನಿಗಮದ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ ಹೇಳಿದರು.

ತಾಲ್ಲೂಕಿನ ಹುಲಗೂರ ಗ್ರಾಮದಲ್ಲಿ ಮಂಗಳವಾರ ಹೊರವಲಯದಲ್ಲಿ ₹4 ಕೋಟಿ ವೆಚ್ಚದಲ್ಲಿ ಹೊಸ ವಿದ್ಯುತ್ ಸಂಪರ್ಕ ಜೋಡಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸುಮಾರು 9 ಪಂಚಾಯತಿಗಳ ವ್ಯಾಪ್ತಿಯಲ್ಲಿ 20 ರಿಂದ 25 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಸಿಗಲಿದೆ. ಇಲ್ಲಿ ವಿದ್ಯುತ್ ಏರಿಳಿತ ಆಗುತ್ತಿದ್ದುದನ್ನು ಅರಿತು ₹4 ಕೋಟಿ ಹಣ ವೆಚ್ಚದಲ್ಲಿ ವಿದ್ಯುತ್ ತಂತಿ ಬಳಸಿ ಸಂಪರ್ಕ ನೀಡಲಾಗುತ್ತಿದೆ. ಈಗಾಗಲೇ 150 ಕಂಬಗಳಿವೆ ಮತ್ತೆ 90 ಕಂಬಗಳನ್ನು ಹೆಚ್ಚಿಗೆ ಹಾಕಿ ಎತ್ತರ ಮಾಡಿ, ರೈತರಿಗೆ ಸಮಸ್ಯೆಯಾಗದ ರೀತಿಯಲ್ಲಿ ಪಾರದರ್ಶಕ ಹಾಗೂ ಪ್ರಾಮಾಣಿಕ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದ್ದು, 1 ತಿಂಗಳಲ್ಲಿ ಕಾಮಗಾರಿ ಮುಗಿಸಲಾಗುತ್ತಿದೆ ಎಂದರು.

ಮುಖಂಡರಾದ ಗುರುನಗೌಡ ಪಾಟೀಲ, ಶಿವಾನಂದ ಸೊಬರದ, ಮುಕ್ತಿಯಾರ ತಿಮ್ಮಾಪುರ, ಬಿರೇಶ ಜೆಟೆಪ್ಪನವರ, ರುದ್ರೇಶ ಗುಡಗೇರಿ, ಶಾಸನಗೌಡ ಪಾಟೀಲ, ನಾಗನಗೌಡ ಪಾಟೀಲ, ಆನಂದ ಕೆಳಗಿನಮನಿ, ಆಜಾದ ಮುಲ್ಲಾ, ನೀಲಪ್ಪ ಬಾಲಪ್ಪನವರ, ಗಿರಿಮಲ್ಲಪ್ಪ ದೇಸಾಯಿ, ಇಂತಿಯಾಜ್ ಭಾವಿಕಟ್ಟಿ, ರವಿ ಹೂಗಾರ, ಶರೀಫ ಅರಳೀಮರದ, ಇರ್ಪಾನ್ ಚಿಲ್ಲೂರ ಹಾಗೂ ಹೆಸ್ಕಾಂ ಎಸ್ಒ ಬಸವರಾಜ ಬಂಡಿವಡ್ಡರ ಸೇರಿದಂತೆ ಹೆಸ್ಕಾಂ ಇಲಾಖೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.