ಶಿಗ್ಗಾವಿ: ಪಟ್ಟಣದ ವಿರಕ್ತಮಠದಲ್ಲಿ ಮಾರ್ಚ್ 3ರಿಂದ 11ರವರೆಗೆ 33ನೇ ಶರಣ ಸಂಸ್ಕೃತಿ ಉತ್ಸವ ನಡೆಯಲಿದ್ದು ಭಕ್ತ ಸಮೂಹ ಸೇವಾ ಕಾರ್ಯಕರ್ತರಂತೆ ಕಾರ್ಯ ಕೈಗೊಳ್ಳಬೇಕು ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬುಧವಾರ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ವಿರಕ್ತಮಠದಲ್ಲಿ 32 ವರ್ಷಗಳಿಂದ ಶರಣ ಸಂಸ್ಕೃತಿ ಉತ್ಸವ ನಡೆಯುತ್ತ ಬಂದಿದ್ದು, ಪ್ರಸಕ್ತ ವರ್ಷದಲ್ಲಿ ಬಂಡಿವಾಡದ ಸೀತಾಗಿರಿ ಎ.ಸಿ. ವಾಲಿ ಮಹಾರಾಜರು ಸದಮಲ ಜ್ಞಾನ ಪ್ರವಚನ ನೀಡಲಿದ್ದಾರೆ. ನಿತ್ಯ ವಿವಿಧ ಮಠಾಧೀಶರು, ಚಿಂತಕರು, ಸಾಹಿತಿಗಳಿಂದ ಶರಣರ ತತ್ವ ಚಿಂತನೆಗಳ ಗೋಷ್ಠಿಗಳು ನಡೆಯಲಿವೆ. ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕೊನೆಯ ದಿನ ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹಗಳು ಜರುಗಲಿವೆ. ಅವುಗಳಲ್ಲಿ ಯಾವುದೇ ತೊಂದರೆ ಆಗದಂತೆ ಭಕ್ತರು ಸೇವಾ ಕಾರ್ಯಕರ್ತರಂತೆ ನಿಂತು ಕೆಲಸ ಮಾಡಬೇಕು. ಹಂಚಿಕೊಂಡಿರುವ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಬರುವ ಭಕ್ತ ಸಮೂಹಕ್ಕೆ ಅನ್ನಪ್ರಸಾದ, ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ದೂರದಿಂದ ಬರುವ ಜನರಿಗೆ ನೆರವಾಗಬೇಕು’ ಎಂದರು.

ಸರ್ಕಾರಿ ಐಟಿಐ ಕಾಲೇಜಿನ ಉಪನ್ಯಾಸಕ ಶಶಿಕಾಂತ ರಾಠೋಡ, ಪುಟ್ಟರಾಜ ಕವಿಗವಾಯಿಗಳ ಸಂಘದ ಅಧ್ಯಕ್ಷ ಫಕ್ಕೀರೇಶ ಕೊಂಡಾಯಿ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಡಿ. ಯತ್ನಹಳ್ಳಿ, ಪುಟ್ಟರಾಜ ಬ್ಯಾಂಕಿನ ವ್ಯವಸ್ಥಾಪಕ ಹನುಮಂತಪ್ಪ ಯು.ವಿ., ಶಿಕ್ಷಕ ಎಸ್.ಬಿ. ತೆಂಬದಮನಿ, ಕಸಾಪ ತಾಲ್ಲೂಕು ಘಟಕದ ಸದಸ್ಯರಾದ ಶಂಭು ಕೆರೆ, ರಮೇಶ ಕಡಕೋಳ ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಬಳಗದ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.

ಸಾಮೂಹಿಕ ವಿವಾಹ: ನೋಂದಣಿಗೆ ಆಹ್ವಾನ

ಶರಣ ಸಂಸ್ಕೃತಿ ಉತ್ಸವ-2026 ಅಂಗವಾಗಿ ಮಾರ್ಚ್ 11ರಂದು ನಡೆಯಲಿರುವ ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹದಲ್ಲಿ ವಿವಾಹ ಮಾಡಿಕೊಳ್ಳಲು ಬಯಸುವವರು ಫೆ. 25ರೊಳಗೆ ತಮ್ಮ ಜನನ ಪ್ರಮಾಣ ಪತ್ರ ನೀಡುವ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಬಾಲ್ಯವಿವಾಹ ಮತ್ತು ಮರುವಿವಾಹಕ್ಕೆ ಅವಕಾಶವಿಲ್ಲ ಎಂದು ಪ್ರಕಟಣೆಯಲ್ಲಿ ಸಮಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.