ಹಾವೇರಿ: ‘ಕೆಲ ಪತ್ರಕರ್ತರ ಬಗ್ಗೆ ಇತ್ತೀಚಿನ ದಿನಗಳಲ್ಲಿ ದೂರುಗಳು ಬರುತ್ತಿವೆ. ಸುಳ್ಳು, ಜೊಳ್ಳು, ಕ್ರಿಮಿನಲ್ ಹಾಗೂ ಬ್ಲ್ಯಾಕ್ಮೇಲ್ ಪತ್ರಕರ್ತರ ಹಾವಳಿಯಿದೆ. ಇಂಥವರಿಗೆ ನಮ್ಮ ಸಂಘೆಟನೆಯಲ್ಲಿ ಜಾಗವಿಲ್ಲ. ಕಾರ್ಯನಿರತರಿಗೆ ಮಾತ್ರ ಸಂಘವಿದೆ’ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ನಗರದ ಸಜ್ಜನರ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ’ದಲ್ಲಿ ಪಾಲ್ಗೊಂಡಿದ್ದ ಅವರು, ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.

‘ನಮ್ಮಲ್ಲಿ ರಾಶಿ ರಾಶಿ ಪತ್ರಕರ್ತರಿದ್ದಾರೆ. ಆದರೆ, ವಿಶ್ವಾಸಾರ್ಹತೆವುಳ್ಳ ಪತ್ರಕರ್ತರ ಕೊರತೆಯಿದೆ. ಅಂಥ ವಿಶ್ವಾಸಾರ್ಹ ಪತ್ರಕರ್ತರನ್ನು ಸಮಾಜ ಬಯಸುತ್ತಿದೆ. ಬರವಣಿಗೆ ಹಾಗೂ ನಡವಳಿಕೆ ಮೂಲಕ ಪತ್ರಕರ್ತ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ಯಾವುದೇ ಸ್ಥಳಕ್ಕೆ ಹೋದರೂ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಹಿಡಿದು ಸಮಾಜದ ಕೊನೆ ವ್ಯಕ್ತಿಯ ಜೊತೆಗೆ ಒಂದೇ ನಡವಳಿಕೆ ಇಟ್ಟುಕೊಳ್ಳಬೇಕು. ಬೆನ್ನಹಿಂದೆ ಮಾತನಾಡುವವರು ‘ಒಳ್ಳೆಯ ಪತ್ರಕರ್ತ’ ಎಂದು ಮಾತನಾಡಿದರೆ, ಅದುವೇ ಪತ್ರಕರ್ತನಿಗೆ ದೊಡ್ಡ ಪ್ರಶಸ್ತಿ’ ಎಂದು ಹೇಳಿದರು.

ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ ಮಾತನಾಡಿ, ‘ಒಬ್ಬ ವ್ಯಕ್ತಿಗೆ ಕಣ್ಣು–ಕಿವಿ ಎಷ್ಟು ಮುಖ್ಯವೋ, ಸಮಾಜಕ್ಕೆ ಕಣ್ಣು–ಕಿವಿಯಾಗಿರುವ ಪತ್ರಿಕೋದ್ಯಮವೂ ಮುಖ್ಯ. ಪೊಲೀಸ್ ಇಲಾಖೆಯಾಗಲಿ ಪತ್ರಿಕೋದ್ಯಮವಾಗಲಿ ನೈತಿಕತೆ, ವೃತ್ತಿಪರತೆ ಹಾಗೂ ವಸ್ತುನಿಷ್ಠತೆಯಲ್ಲಿ ತುಂಬಾ ಬದಲಾವಣೆಯಾಗಿದೆ. ಸಾಮಾಜಿಕ ಮಾಧ್ಯಮಗಳ ಹಾವಳಿ ನಡುವೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದವರ ವೃತ್ತಿ ಭದ್ರತೆಯದ್ದು ಸವಾಲಾಗಿದೆ. ಎಲ್ಲ ಸವಾಲು ಮೆಟ್ಟಿನಿಂತು ನೈತಿಕತೆಯ ದಾರಿಯಲ್ಲಿ ಪತ್ರಕರ್ತರು ಕೆಲಸ ಮಾಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್ ಮಾತನಾಡಿ, ‘ಸಮಾಜದ ಕಿವಿ–ಕಣ್ಣು ಪತ್ರಿಕೋದ್ಯಮ. ಆಡಳಿತದ ವಿಷಯದಲ್ಲಿ ಏನಾದರೂ ಸಮಸ್ಯೆಯಿದ್ದರೆ, ಬದಲಾವಣೆ ಆಗಬೇಕಿದ್ದರೆ ಮಾಧ್ಯಮದವರು ಮಾಹಿತಿ ನೀಡಿದರೆ ನಾವು ಸರಿ ಮಾಡುತ್ತೇವೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಲ್. ನಾಗರಾಜ್ ಮಾತನಾಡಿ, ‘ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನವೀಯತೆ ಮರೆಯುತ್ತಿದ್ದೇವೆ. ಪತ್ರಕರ್ತರು, ಸಮಾಜದ ಮೇಲಾಗುವ ಸಾಧಕ–ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ವಸ್ತುನಿಷ್ಠ ವರದಿ ಬರೆಯಬೇಕು’ ಎಂದರು.

ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನಾಗರಾಜ ಕುರುವತ್ತೇರ, ಉಪಾಧ್ಯಕ್ಷರಾಗಿ ನಾರಾಯಣ ಹೆಗಡೆ, ವಿನಾಯಕ ಹುದ್ದಾರ, ನಾಗರಾಜ ಮೈದೂರ, ಪ್ರಧಾನ ಕಾರ್ಯದರ್ಶಿಯಾಗಿ ವೀರೇಶ ಮಡ್ಲೂರ, ಖಜಾಂಚಿ ಬಸವರಾಜ ಮರಳಿಹಳ್ಳಿ, ಕಾರ್ಯದರ್ಶಿಯಾಗಿ ಸಂತೋಷಕುಮಾರ ಮಹಾಂತಶೆಟ್ಟರ, ಕೇಶವಮೂರ್ತಿ ವಿ.ಬಿ., ಮಂಜುನಾಥ ಗುಡಿಸಾಗರ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಇಂದುಧರ ಹಳಕಟ್ಟಿ, ಕರಿಯಪ್ಪ ಚೌಡಕ್ಕನವರ, ಕಿರಣ ಮಾಸಣಗಿ, ಗಣೇಶ ಅರ್ಕಾಚಾರಿ, ಗುರುದತ್ತ ಭಟ್, ಗೋಣೆಪ್ಪ ದೀಪಾವಳಿ, ತೇಜಸ್ವಿನಿ ಕಾಶೆಟ್ಟಿ, ಪ್ರಶಾಂತ ಮರೆಮ್ಮನವರ, ಬಸವರಾಜ ಸರೂರ, ಮಂಜುನಾಥ ಯರವಿನತಲಿ, ರಾಜೇಂದ್ರಕುಮಾರ ರಿತ್ತಿ, ಸದಾಶಿವ ಹಿರೇಮಠ, ಸಂಜಯಕುಮಾರ ರಿತ್ತಿ, ಹೊನ್ನಪ್ಪ ಬಾರ್ಕಿ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಪಿ.ಎಂ. ಸತ್ಯಪ್ಪನವರ, ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ವೀರೇಶ ಬಾರ್ಕಿ ಅವರು ಅಧಿಕಾರ ಸ್ವೀಕರಿಸಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಬಿ. ಮದನಗೌಡ, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಮಾಧ್ಯಮ ಅಕಾಡೆಮಿ ಸದಸ್ಯ ಜೆ. ಅಬ್ಬಾಸ್ ಮುಲ್ಲಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ ಸಮಾರಂಭದಲ್ಲಿದ್ದರು.

‘ಪತ್ರಕರ್ತರಿಗೆ ವಿಮೆ ಕಲ್ಪಿಸಿ’

‘ಜಿಲ್ಲೆಯಲ್ಲಿರುವ ಎಲ್ಲ ಪತ್ರಕರ್ತರಿಗೆ ವಿಮೆ ಸೌಲಭ್ಯ ಕಲ್ಪಿಸಬೇಕು’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಕುರುವತ್ತೇರ ಆಗ್ರಹಿಸಿದರು. ಸಮಾರಂಭದಲ್ಲಿ ಮಾತನಾಡಿದ ಅವರು ‘ನಗರ ಪಟ್ಟಣ ಪುರಸಭೆ ಹಾಗೂ ಗ್ರಾಮೀಣ ಮಟ್ಟದಲ್ಲಿ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ವಿಮೆ ಕಲ್ಪಿಸಲು ಜಿಲ್ಲಾಧಿಕಾರಿಯವರು ಮುಂದಾಗಬೇಕು’ ಎಂದರು. ‘ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಪಾಸ್ಗಳನ್ನು ನೀಡಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.