ಹಾವೇರಿ: ಶಿವಮೊಗ್ಗ ಜಿಲ್ಲೆಯ ಸಿಗಂದೂರಿನ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುವ ಹಾವೇರಿ ಜಿಲ್ಲೆಯ ಜನರಿಗಾಗಿ ವಾಕರಸಾಸಂ (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ವತಿಯಿಂದ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.

‘ಜುಲೈ 20ರಿಂದ ಹಾವೇರಿ ಮತ್ತು ರಾಣೆಬೆನ್ನೂರು ಬಸ್ ನಿಲ್ದಾಣಗಳಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ವಿಶೇಷ ಬಸ್ಗಳು ಕಾರ್ಯಾಚರಣೆ ಪ್ರಾರಂಭಿಸಲಿವೆ’ ಎಂದು ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ತಿಳಿಸಿದ್ದಾರೆ.

‘ಹಾವೇರಿಯಿಂದ ಬೆಳಿಗ್ಗೆ 7.30 ಗಂಟೆಗೆ ಬಸ್ ಹೊರಡಲಿದ್ದು, ಬೆಳಿಗ್ಗೆ 11.30 ಗಂಟೆಗೆ ಸಿಗಂದೂರು ದೇವಸ್ಥಾನ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3.30 ಗಂಟೆಗೆ ಹೊರಡಲಿರುವ ಬಸ್, ಸಂಜೆ 7.30 ಗಂಟೆಗೆ ಹಾವೇರಿ ತಲುಪಲಿದೆ’ ಎಂದು ಹೇಳಿದ್ದಾರೆ.

‘ರಾಣೆಬೆನ್ನೂರಿನಿಂದ ಬೆಳಿಗ್ಗೆ 7.30 ಗಂಟೆಗೆ ಬಸ್ ಹೊರಡಲಿದ್ದು, ಬೆಳಿಗ್ಗೆ 11 ಗಂಟೆಗೆ ದೇವಸ್ಥಾನ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3 ಗಂಟೆಗೆ ಹೊರಡಲಿರುವ ಬಸ್, ಸಂಜೆ 6.30 ಗಂಟೆಗೆ ರಾಣೆಬೆನ್ನೂರು ತಲುಪಲಿದೆ’ ಎಂದಿದ್ದಾರೆ.

‘ಸಂಸ್ಥೆಯ ಜಾಲತಾಣದ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ. ಹಾವೇರಿಯಿಂದ ಸಿಗಂದೂರು ದೇವಸ್ಥಾನಕ್ಕೆ ₹ 455 ಹಾಗೂ ರಾಣೆಬೆನ್ನೂರಿನಿಂದ ಸಿಗಂದೂರಿಗೆ ₹ 430 (ಹೋಗಿ ಬರುವ) ಪ್ರಯಾಣ ದರವಿದೆ. ಈ ಬಸ್ಗಳಿಗೆ ಶಕ್ತಿ ಯೋಜನೆ ಅನ್ವಯವಾಗುವುದಿಲ್ಲ. ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.