ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಜೋಗ ಜಲಪಾತಕ್ಕೆ ವಿಶೇಷ ಬಸ್‌

ಪ್ರವಾಸಿಪ್ರಿಯರಿಗೆ ಸಾರಿಗೆ ಸಂಸ್ಥೆಯಿಂದ ವಿಶೇಷ ಪ್ಯಾಕೇಜ್‌
Last Updated 28 ಜುಲೈ 2021, 14:02 IST
ಅಕ್ಷರ ಗಾತ್ರ

ಹಾವೇರಿ: ವಿಶ್ವಪ್ರಸಿದ್ಧ ಪ್ರೇಕ್ಷಣಿಯ ಸ್ಥಳ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತಕ್ಕೆ ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ವೀಕ್ಷಣೆಗಾಗಿ ತೆರಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಹಾವೇರಿಯಿಂದ ಮತ್ತುರಾಣೆಬೆನ್ನೂರಿನಿಂದ ಜೋಗ ಜಲಪಾತಕ್ಕೆ ವಿಶೇಷ ಬಸ್‌ಗಳ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ತಿಳಿಸಿದ್ದಾರೆ.

ವಿಶೇಷ ಬಸ್ ರಾಣೆಬೆನ್ನೂರಿನಿಂದ ಬೆಳಿಗ್ಗೆ 8.30ಕ್ಕೆ ಹೊರಟು ಜೋಗಕ್ಕೆ ಮಧ್ಯಾಹ್ನ 12ಕ್ಕೆ ತಲುಪುತ್ತದೆ. ಹಿರೇಕೆರೂರು-ಶಿರಾಳಕೊಪ್ಪ-ಸೊರಬ-ಸಿದ್ದಾಪುರ ಮಾರ್ಗವಾಗಿ ತೆರಳಲಿದೆ. ಮರಳಿ ಜೋಗದಿಂದ ಸಂಜೆ 4 ಗಂಟೆಗೆ ಹೊರಟು ರಾಣೆಬೆನ್ನೂರನ್ನು ರಾತ್ರಿ 7.30ಕ್ಕೆ ತಲುಪಲಿದೆ. ಇದು ವಿಶೇಷ ಪ್ಯಾಕೇಜ್ ಆಗಿದ್ದು, ಒಬ್ಬರಿಗೆ ಒಟ್ಟು ₹300 ಟಿಕೆಟ್‌ ದರವಿದೆ.

ಪ್ರತಿ ಶನಿವಾರ ಮತ್ತು ಭಾನುವಾರ ಹಾವೇರಿ ಬಸ್‌ ನಿಲ್ದಾಣದಿಂದ ಬೆಳಿಗ್ಗೆ 8.30ಕ್ಕೆ ಹೊರಟು ಶಿರಸಿಯನ್ನು ತಲುಪಿ, ಅಲ್ಲಿ ಮಾರಿಕಾಂಬಾ ದೇವಿಯ ದರ್ಶನ ಪಡೆದು ನಂತರ ಜೋಗ ಜಲಪಾತವನ್ನು ಮಧ್ಯಾಹ್ನ 1 ಗಂಟೆಗೆ ತಲುಪಲಿದೆ. ಸಂಜೆ 4 ಗಂಟೆಗೆ ಜೋಗದಿಂದ ಹೊರಟು ಸಂಜೆ 7.30ಕ್ಕೆ ಹಾವೇರಿ ತಲುಪಲಿದೆ. ಪ್ರಯಾಣ ದರ ಒಬ್ಬರಿಗೆ ₹325 ನಿಗದಿಪಡಿಸಲಾಗಿದೆ.

ಸದರಿ ವಿಶೇಷ ಬಸ್‌ಗಳಿಗೆ ಮುಂಗಡ ಟಿಕೆಟ್‌ ಬುಕ್ಕಿಂಗ್‌ಗಾಗಿ www.ksrtc .in ನಲ್ಲಿ ಆಸನಗಳನ್ನು ಕಾಯ್ದಿರಿಸಬಹುದಾಗಿರುತ್ತದೆ. ಮಾಹಿತಿಗೆ ಮೊ: 7760991925/ 7259954181 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT