ರಾಣೆಬೆನ್ನೂರು: ‘ಎಸ್ಎಸ್ಎಲ್ಸಿ ಪರೀಕ್ಷೆಯು ಮಕ್ಕಳ ಜೀವನದ ಒಂದು ತಿರುವು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸಮಯ ಸದುಪಯೋಗ ಪಡಿಸಿಕೊಂಡು ಕಠಿಣ ಪರಿಶ್ರಮದಿಂದ ಅಧ್ಯಯನ ಕೈಗೊಳ್ಳಬೇಕು’ ಎಂದು ಮುಖ್ಯ ಶಿಕ್ಷಕಿ ಜಯಲಲಿತಾ ಹೊಸಮನಿ ಹೇಳಿದರು.

ಇಲ್ಲಿನ ವಿದ್ಯಾನಗರದ ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಜೆಸಿಐ ರಾಣೆಬೆನ್ನೂರು, ಜೆಎಸಿ ಅಲ್ಯೂಮಿನಿ ಸಂಸ್ಥೆಯಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪರೀಕ್ಷಾ ಭಯ ನಿವಾರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.

‘ಪರೀಕ್ಷಾ ಭಯವನ್ನು ಬಿಟ್ಟು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಮುಂದಾಗಬೇಕು. ಪಾಠ ಪ್ರವಚನಗಳನ್ನು ಮನನ ಮಾಡಿಕೊಳ್ಳಬೇಕು. ಉತ್ತಮ ಫಲಿತಾಂಶದೊಂದಿಗೆ ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕಾಗಿದೆ’ ಎಂದರು.

ಜೆಸಿಐ ವಲಯ ತರಬೇತುದಾರ ಪ್ರಭುಲಿಂಗಪ್ಪ ಹಲಗೇರಿ ಅವರು ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ, ಏಕಾಗ್ರತೆ, ಗ್ರಹಣಶಕ್ತಿ ಮತ್ತು ಆಸಕ್ತಿ ಹುಟ್ಟಿಸುವ ಕುರಿತು ಚಟುವಟಿಕೆ ಆಧಾರಿತ ತರಬೇತಿ ನೀಡಿದರು.

ಜೆಎಸಿ ಅಲುಮ್ನಿ ಸಂಸ್ಥೆ ವಲಯ ಚೇರಮನ್ ರುದ್ರಪ್ಪ ಬಾಳಿಕಾಯಿ ಅವರು ಮಕ್ಕಳಿಗೆ ಅಪರಾಧ ತಡೆಯುವಿಕೆ ಮತ್ತು ಮೊಬೈಲ್ ಬಳಕೆ ಬಗ್ಗೆ ಜಾಗೃತಿ ಮೂಡಿಸಿದರು.

ಶಿಕ್ಷಕರಾದ ಎಂ.ಬಿ. ಶಿವಾನಂದ, ಎಸ್.ಆರ್. ತೆವರಿ, ದೊಡ್ಡಮನಿ, ಎಚ್. ಶಾಂತರಾಜ್, ಜ್ಯೋತಿ, ನಿವೇದಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.