ಕಾರ್ಖಾನೆ ದರಕ್ಕೆ ಒಪ್ಪದ ರೈತರು | ದಿನಕ್ಕೆ 10ರಿಂದ 15 ಟನ್ ಬೆಲ್ಲ ತಯಾರಿ | ಕೆ.ಜಿ. ಬೆಲ್ಲಕ್ಕೆ ₹38ರಿಂದ ₹42 ದರ

ಹಾವೇರಿ: ‘ಕಬ್ಬಿನ ದರ ನಿಗದಿಯಲ್ಲಿ ಅನ್ಯಾಯವಾಗಿದೆ’ ಎಂದು ಬೇಸತ್ತ ಜಿಲ್ಲೆಯ ಹಲವು ರೈತರು, ಆಲೆಮನೆ ಶುರು ಮಾಡಿ ಬೆಲ್ಲ ತಯಾರಿಸುವ ಮೂಲಕ ದೊಡ್ಡ ಕಾರ್ಖಾನೆಗಳಿಗೆ ಸೆಡ್ಡು ಹೊಡೆದಿದ್ದಾರೆ. ರೈತರು ತಯಾರಿಸುತ್ತಿರುವ ‘ಸಾವಯವ’ ಬೆಲ್ಲಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಪ್ರತಿ ಟನ್ ಕಬ್ಬಿನಿಂದ ಅನ್ನದಾತರಿಗೆ ಸುಮಾರು ₹ 4ಸಾವಿರದಿಂದ ₹5 ಸಾವಿರ ಆದಾಯ ಸಿಗುತ್ತಿದೆ.

ಜಿಲ್ಲೆಯ ಹಾನಗಲ್ ತಾಲ್ಲೂಕಿನ ಸಂಗೂರು, ಶಿಗ್ಗಾವಿ ತಾಲ್ಲೂಕಿನ ಕೋಣನಕೇರಿ, ರಟ್ಟೀಹಳ್ಳಿ ತಾಲ್ಲೂಕಿನ ಭೈರನಪಾದದಲ್ಲಿ ಮೂರು ಕಾರ್ಖಾನೆಗಳಿವೆ. ಇತ್ತೀಚೆಗೆ ಕಬ್ಬಿನ ದರ ನಿಗದಿ ವಿಚಾರವಾಗಿ ರೈತರು ಅಹೋರಾತ್ರಿ ಹೋರಾಟ ನಡೆಸಿದ್ದರು. ರೈತರು ಹಾಗೂ ಕಾರ್ಖಾನೆ ಮಾಲೀಕರ ನಡುವೆ ಸಂಧಾನ ನಡೆಸಿದ್ದ ಜಿಲ್ಲಾಧಿಕಾರಿ, ಅಂತಿಮವಾಗಿ ಪ್ರತಿ ಟನ್ಗೆ ₹2,850 ಹಾಗೂ ₹2,775 ದರ ನಿಗದಿಪಡಿಸಿದ್ದಾರೆ.

ಈ ದರವನ್ನು ಒಪ್ಪಿಕೊಂಡಿರುವ ಹಲವು ರೈತರು, ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ. ಹಾನಗಲ್ ತಾಲ್ಲೂಕಿನ ಶೀಗಿಹಳ್ಳಿ ಹಾಗೂ ಶಿಂಗಾಪುರ ಗ್ರಾಮದ ರೈತರು, ಅವೈಜ್ಞಾನಿಕ ದರದ ವಿರುದ್ಧ ಸೆಡ್ಡು ಹೊಡೆದಿದ್ದಾರೆ. ಇವರೆಲ್ಲರೂ ಆಲೆಮನೆ ಮೂಲಕ ಬೆಲ್ಲವನ್ನು ತಯಾರಿಸಿ, ಕಾರ್ಖಾನೆ ನೀಡುವ ದರಕ್ಕಿಂತಲೂ ಹೆಚ್ಚಿನ ಹಣ ಪಡೆಯುತ್ತಿದ್ದಾರೆ.

ಜಿಲ್ಲಾ ಕೇಂದ್ರದ ಮೂಲಕ ಹಾನಗಲ್ಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಏಳು ಆಲೆಮನೆಗಳು ಕಾರ್ಯಾರಂಭ ಮಾಡಿವೆ. ಪ್ರತಿ ಆಲೆಮನೆಯಲ್ಲಿಯೂ ದಿನಕ್ಕೆ 10ರಿಂದ 15 ಟನ್ ಬೆಲ್ಲ ತಯಾರಿಸಲಾಗುತ್ತಿದೆ. ಪ್ರತಿ ಕೆ.ಜಿ. ಬೆಲ್ಲವನ್ನು ₹38 ರಿಂದ ₹42ವರೆಗೂ ಮಾರಾಟ ಮಾಡಲಾಗುತ್ತಿದೆ. ಮುಂಗಡವಾಗಿ ಹಣ ಕೊಟ್ಟು ವ್ಯಾಪಾರಸ್ಥರು ಬೆಲ್ಲ ಖರೀದಿಸುತ್ತಿದ್ದಾರೆ. ಕಬ್ಬು ನೀಡಿದ ಬಳಿಕ ಬಿಲ್ಗಾಗಿ ತಿಂಗಳುಗಟ್ಟಲೇ ಕಾರ್ಖಾನೆಗಳಿಗೆ ಅಲೆದಾಡುತ್ತಿದ್ದ ರೈತರಿಗೆ, ಬೆಲ್ಲ ತಯಾರಿಕೆಯಿಂದ ಕೆಲವೇ ದಿನಗಳಲ್ಲಿ ಹಣ ಸಿಗುತ್ತಿದೆ.

ಜಿಲ್ಲೆಯ ಸಂಗೂರಿನಲ್ಲಿ 1983ರಲ್ಲಿ ಸಂಗೂರು ಸಹಕಾರ ಸಕ್ಕರೆ ಕಾರ್ಖಾನೆ ಆರಂಭವಾಗಿದೆ. ಈ ಕಾರ್ಖಾನೆಯನ್ನು ಇದೀಗ ಜಿ.ಎಂ. ಶುಗರ್ಸ್ ಕಂಪನಿಯು ನಿರ್ವಹಣೆ ಮಾಡುತ್ತಿದೆ. ಕಾರ್ಖಾನೆಯ ಆರಂಭದ ದಿನಗಳಲ್ಲಿಯೂ ಬೆಲೆ ನಿಗದಿ ಹಾಗೂ ಬಿಲ್ ಪಾವತಿಯಲ್ಲಿ ವಿಳಂಬವಾಗುತ್ತಿತ್ತು. ಅಂಥ ಸಂದರ್ಭದಲ್ಲಿಯ ರೈತರು, ಕಾರ್ಖಾನೆಗೆ ಕಬ್ಬು ನೀಡುವುದನ್ನು ಬಂದ್ ಮಾಡಿ ಆಲೆಮನೆ ಆರಂಭಿಸಿದ್ದರು. ಅಂದು ಸಹ ಅಧಿಕ ಲಾಭ ಪಡೆಯುತ್ತಿದ್ದರು.

ಕ್ರಮೇಣ ಕಾರ್ಖಾನೆಯಲ್ಲಿ ತಕ್ಕಮಟ್ಟಿಗೆ ಬೆಲೆ ಸಿಗಲಾರಂಭಿಸಿತು. ಹೀಗಾಗಿ, ರೈತರು ಪುನಃ ಕಾರ್ಖಾನೆಗೆ ಕಬ್ಬು ಕಳುಹಿಸಿದರು. ಹಲವು ಆಲೆಮನೆಗಳು ತಾತ್ಕಾಲಿಕವಾಗಿ ಬಂದ್ ಆಗಿದ್ದವು. ಆದರೆ, ಇತ್ತೀಚಿನ ಎರಡು ವರ್ಷಗಳಿಂದ ಕಬ್ಬು ಬೆಳೆಗಾರರಿಗೆ ಬೆಲೆ ನಿಗದಿಯಲ್ಲಿ ಸಾಕಷ್ಟು ಅನ್ಯಾಯವಾಗುತ್ತಿದೆ. ಇದೇ ಕಾರಣಕ್ಕೆ ಆಲೆಮನೆಗಳು ಪುನರಾರಂಭವಾಗಿವೆ. ಶೀಗಿಹಳ್ಳಿ, ಶಿಂಗಾಪುರ ಸೇರಿದಂತೆ ಜಿಲ್ಲೆಯಾದ್ಯಂತ ಸುಮಾರು 50 ಆಲೆಮನೆಗಳು ಬೆಲ್ಲ ತಯಾರಿಸುತ್ತಿವೆ. ರಸ ತೆಗೆದ ನಂತರ ಉಳಿಯುವ ಕಬ್ಬಿನ ಸಿಪ್ಪೆಯನ್ನೇ ಉರುವಲು ಬೆಂಕಿಗಾಗಿ ಬಳಸುತ್ತಿದ್ದಾರೆ. ಹೊಲಕ್ಕೆ ಗೊಬ್ಬರವೂ ಆಗುತ್ತಿದೆ.

10ರಿಂದ 20 ಎಕರೆಯಲ್ಲಿ ಕಬ್ಬು ಬೆಳೆದಿರುವ ರೈತರು, ತಮ್ಮ ಜಾಗದಲ್ಲಿ ಆಲೆಮನೆ ಮಾಡಿದ್ದಾರೆ. ಕಾರ್ಮಿಕರ ಸಹಾಯದಿಂದ ಬೆಲ್ಲ ತಯಾರಿಸುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬನ್ನು ಹಂತ ಹಂತವಾಗಿ ಕಟಾವು ಮಾಡಿ, ಆಲೆಮನೆಯಲ್ಲಿ ನುರಿಸುತ್ತಿದ್ದಾರೆ. ಗ್ರಾಮದ ಇತರೆ ರೈತರು ಸಹ ಆಲೆಮನೆಗೆ ಕಬ್ಬು ನೀಡುತ್ತಿದ್ದಾರೆ. ಬೆಲ್ಲಕ್ಕಾಗಿ ಕಬ್ಬು ನೀಡುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

‘ಸಂಗೂರು ಕಾರ್ಖಾನೆಯವರು ಟನ್ಗೆ ₹2,775 ನೀಡುವುದಾಗಿ ಹೇಳಿದ್ದಾರೆ. ಇದು ಅವೈಜ್ಞಾನಿಕ. ಹೀಗಾಗಿ, ನಮ್ಮ ಕಬ್ಬನ್ನು ಬೆಲ್ಲ ಮಾಡಿ ಮಾರುತ್ತಿದ್ದೇವೆ. ಇದರಿಂದಾಗಿ ಕಾರ್ಖಾನೆಗಿಂತಲೂ ಹೆಚ್ಚಿನ ಲಾಭ ಸಿಗುತ್ತಿದೆ. ರೈತರಿಂದಲೂ ಕಬ್ಬು ಖರೀದಿಸಿ ಬೆಲ್ಲ ಮಾಡುತ್ತಿದ್ದೇವೆ’ ಎಂದು ಬೆಲ್ಲ ತಯಾರಕ ರೈತ ಶಂಕ್ರಪ್ಪ ಹೇಳಿದರು.

ಇನ್ನೊಬ್ಬ ರೈತ ಚನ್ನವೀರಪ್ಪ ಬೆಂಚಿಹಳ್ಳಿ ಮಾತನಾಡಿ, ‘ನಾವು ತಯಾರಿಸುವ ಸಾವಯವ ಬೆಲ್ಲಕ್ಕೆ ಬೇಡಿಕೆ ಹೆಚ್ಚಿದೆ. ಕೆಲವರು ಸಕ್ಕರೆಯಿಂದ ಬೆಲ್ಲ ಮಾಡುತ್ತಾರೆ. ನಾವು ವ್ಯಾಪಾರಿಗಳು ಹಾಗೂ ಗ್ರಾಹಕರ ಕಣ್ಣೆದುರೇ ಬೆಲ್ಲ ಮಾಡಿ, ಪ್ಯಾಕ್ ಮಾಡಿ ಕೊಡುತ್ತಿದ್ದೇವೆ. ಕೆಲ ವ್ಯಾಪಾರಿಗಳು ಹೆಚ್ಚಿನ ದರ ಸಹ ಕೊಡುತ್ತಾರೆರೆ’ ಎಂದರು.

ಕಬ್ಬಿಗೆ ವೈಜ್ಞಾನಿಕ ಬೆಲೆ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕಾರ್ಖಾನೆಯವರ ಅವೈಜ್ಞಾನಿಕ ಬೆಲೆಯಿಂದ ಬೇಸತ್ತು ಆಲೆಮನೆ ಮಾಡಿದ್ದೇವೆ
ಶಂಭು ನರೇಗಲ್ ಶೀಗಿಹಳ್ಳಿ ರೈತ

ಆಲೆಮನೆ ಮಾಡಿರುವುದರಿಂದ ಕಬ್ಬಿನ ಬಿತ್ತನೆಯಿಂದ ಹಿಡಿದು ಕಟಾವು ಮಾಡಿ ಬೆಲ್ಲ ಮಾಡುವವರೆಗೆ ತಗುಲಿದ ಖರ್ಚು ಕಳೆದು ಟನ್ಗೆ ₹2000–₹3000 ಉಳಿಯುತ್ತಿದೆ
ಪ್ರಭು ಶಿವಲಿಂಗಪ್ಪ ಉಳ್ಳಾಗಡ್ಡಿ ಶೀಗಿಹಳ್ಳಿ

ನುರಿತ ಕಾರ್ಮಿಕರ ಕೊರತೆ

ರೈತರು ಆರಂಭಿಸಿರುವ ಆಲೆಮನೆಯಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆ ಕಾಡುತ್ತಿದೆ. ಆಲೆಮನೆ ಮಾಡಿರುವ ಕೆಲ ರೈತರು ಅನುಭವಿಗಳು. ಇನ್ನು ಹಲವರಿಗೆ ಅನುಭವ ಕಡಿಮೆ. ಹೀಗಾಗಿ ನುರಿತ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಶೀಗಿಹಳ್ಳಿ ಹಾಗೂ ಶಿಂಗಾಪುರದಲ್ಲಿರುವ ರೈತರು ಉತ್ತರ ಪ್ರದೇಶದಿಂದ ನುರಿತ ಕಾರ್ಮಿಕರನ್ನು ಕರೆಯಿಸಿ ಆಲೆಮನೆ ನಡೆಸುತ್ತಿದ್ದಾರೆ. ಆಲೆಮನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಕಾರ್ಮಿಕರು ಪ್ರತಿ ಟನ್ ಬೆಲ್ಲ ತಯಾರಿಸಲು ₹300ರಿಂದ ₹400 ಕೂಲಿ ಪಡೆಯುತ್ತಾರೆ. ದಿನಕ್ಕೆ 15 ಟನ್ ಬೆಲ್ಲವಾಗುತ್ತಿದ್ದು ಕಾರ್ಮಿಕರಿಗೆ ₹5000ರಿಂದ ₹6000 ಸಿಗುತ್ತಿದೆ. ‘ಉತ್ತರ ಪ್ರದೇಶದಲ್ಲೂ ಬೆಲ್ಲ ತಯಾರಿಸುತ್ತೇವೆ. ಅಲ್ಲಿ ಈಗ ಚಳಿ ಜಾಸ್ತಿ. ಬೆಲ್ಲ ತಯಾರಿ ಕಡಿಮೆ. ಹಾವೇರಿ ರೈತರು ಕರೆದಿದ್ದರಿಂದ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದೇವೆ. ಒಂದು ಆಲೆಮನೆಯಲ್ಲಿ 6ರಿಂದ 8 ಮಂದಿ ಇದ್ದೇವೆ’ ಎಂದು ಕಾರ್ಮಿಕ ರಾಜೀವ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.