ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂದೆ, ತಾಯಿಯ ಜೋಪಾನ ಕಾರ್ಯ ಮಕ್ಕಳ ಕರ್ತವ್ಯ’

Published 27 ಏಪ್ರಿಲ್ 2024, 15:25 IST
Last Updated 27 ಏಪ್ರಿಲ್ 2024, 15:25 IST
ಅಕ್ಷರ ಗಾತ್ರ

ತಡಸ(ಶ್ಯಾಡಂಬಿ): ಮಕ್ಕಳು ವಿದ್ಯಾವಂತರಾಗಿ ದೊಡ್ಡ ಹುದ್ದೆಗಳಲ್ಲಿ ಇದ್ದರೂ ತಂದೆ, ತಾಯಿಗಳನ್ನು ವೃದ್ಧಾಶ್ರಮಕ್ಕೆ ಬಿಡುವ ಪರಂಪರೆ ಇದೆ ಎಂದು ಬಂಕಾಪುರದ ಅರಳೆಲೆಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಶ್ಯಾಡಂಬಿ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಂದೆ, ತಾಯಿಗಳಲ್ಲಿಯೇ ದೇವರನ್ನು ಕಾಣಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಶಿಧರ ಯಲಿಗಾರ, ತಂದೆ, ತಾಯಿಯರನ್ನು ಅನಾಥ ಆಶ್ರಮದಲ್ಲಿ ಬಿಡುವುದು ನಮ್ಮ ಸಂಸ್ಕೃತಿಯಲ್ಲ. ಅವರನ್ನು ಜೋಪಾನ ಮಾಡುವುದು ನಮ್ಮ ಜವಾಬ್ದಾರಿ ಎಂದರು.

ಮುಖ್ಯ ಅತಿಥಿ, ಸೋಮಣ್ಣ ಬೇವಿನಮರದ ಮಾತನಾಡಿ, ದ್ಯಾಮವ್ವ, ದುರ್ಗವ್ವ, ಕೊರವ್ವ, ಕೆಮ್ಮವ್ವ ಎಂಬ ಅನೇಕ ದೇವರುಗಳ ಇವೆ. ಅವು ಯಾವವೂ ನಿಜವಾದ ದೇವರುಗಳಲ್ಲ. ತಂದೆ, ತಾಯಿಯರೇ ನಿಜವಾದ ದೇವರು. ಅವರನ್ನು ಗೌರವಿಸಬೇಕಿದೆ ಎಂದರು.

ಯಾಶೀರಖಾನ್ ಪಠಾಣ, ತಿಪ್ಪಣ್ಣ ಸಾತಣ್ಣವರ, ಕೊಟ್ರೇಶ ಮಾಸ್ತರ ಬೆಳಗಲಿ, ಫಕ್ಕಿರೇಶ ಮಾಸ್ತರ ಕೊಂಡಾಯಿ ಮಾತನಾಡಿದರು.

ಗ್ರಾಮದ ಧರ್ಮ, ಕಾರ್ಯದ ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ಬೆಳಗಲಿ ಗ್ರಾಮದ ಕಲಾವಿದರಿಂದ ಹಾಗೂ ಮಕ್ಕಳಿಂದ ಸಾಂಸ್ರ್ಕತಿಕ ಕಾರ್ಯಕ್ರಮ ನೆರವೇರಿತು.

ಮಾಂತೇಶ ಮಾಸ್ತರ ಬೆಳಗಲಿ, ಸುರೇಶ ಯಲಿಗಾರ, ನೀಲಪ್ಪ ಮಾಕಪ್ಪನವರ, ಚಂದ್ರು ಹುಬ್ಬಳ್ಳಿ, ಬಿ.ಎಸ್. ಹಿರೇಮಠ, ಬಸವರಾಜ ಹಿರೇಮಠ, ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT