ಶನಿವಾರ, ಏಪ್ರಿಲ್ 17, 2021
22 °C
ಷೇರು ಲಾಭದ ಆಮಿಷ ತೋರಿಸಿ ವಂಚನೆ

₹13 ಲಕ್ಷ ಕಳೆದುಕೊಂಡ ಶಿಕ್ಷಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಇಂಡಿಯನ್‌ ಷೇರ್‌ ಮಾರ್ಕೆಟ್‌ ಹಾಗೂ ಫೋರೆಕ್ಸ್‌ ಶೇರ್‌ ಟ್ರೇಡಿಂಗ್‌ ಮೂಲಕ ಲಾಭ ಮಾಡಿಕೊಡುತ್ತೇವೆ ಎಂದು ನಂಬಿಸಿದ ವಂಚಕರು, ಶಿಕ್ಷಕರ ಅಕೌಂಟ್‌ನಿಂದ ₹12.95 ಲಕ್ಷ ದೋಚಿದ ಪ್ರಕರಣ ನಗರದ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. 

ಬ್ಯಾಡಗಿ ತಾಲ್ಲೂಕು ಅಂಗರಗಟ್ಟಿ ಗ್ರಾಮದ ಶಿಕ್ಷಕ ಮಾಲತೇಶ ಮಲ್ಲಾಡದ ಹಣ ಕಳೆದುಕೊಂಡವರು. 

2020ರ ಜುಲೈ 7ರಿಂದ ಸೆಪ್ಟೆಂಬರ್‌ 2ರವರೆಗೆ ಅನುಷ್ಕಾ ಮತ್ತು ರಚನಾ ಎಂಬುವವರು ಹಲವು ಬಾರಿ ಕರೆ ಮಾಡಿ, ಶಿಕ್ಷಕರ ಮತ್ತು ಅವರ ಪತ್ನಿಯ ಅಕೌಂಟುಗಳಿಂದ ಫೋನ್‌ಪೇ ಮತ್ತು ಆರ್‌ಟಿಜಿಎಸ್‌ ಮೂಲಕ ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು