ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

ಹಾವೇರಿ | ಸಂಚಾರ ನಿಯಮ ಉಲ್ಲಂಘನೆ: ಕಾಣದಂತಿರುವ ಪೊಲೀಸರು

ಅಪಘಾತ: ಹೆಲ್ಮೆಟ್ ರಹಿತ ಚಾಲನೆಯಿಂದ ಸಾವು; ರಾಜಕಾರಣಿಗಳಿಂದ ಕರೆ ಮಾಡಿಸಿ ಪೊಲೀಸರಿಗೆ ಬೆದರಿಕೆ
Published : 16 ಫೆಬ್ರುವರಿ 2026, 8:12 IST
Last Updated : 16 ಫೆಬ್ರುವರಿ 2026, 8:12 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಜಖಂಗೊಂಡಿದ್ದ ಗೂಡ್ಸ್ ವಾಹನ 
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಜಖಂಗೊಂಡಿದ್ದ ಗೂಡ್ಸ್ ವಾಹನ 
ಜನರ ಸುರಕ್ಷಿತ ಹಾಗೂ ಸುಗಮ ಪ್ರಯಾಣಕ್ಕೆ ಸರ್ಕಾರ ನಿಯಮಗಳನ್ನು ರೂಪಿಸಿದ್ದು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಪಾಲಿಸದಿರುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲು ನಗರದ ಹಲವು ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ
ಯಶೋಧಾ ವಂಟಗೋಡಿ ಜಿಲ್ಲಾ ಎಸ್‌.ಪಿ.
ಬೈಕ್‌ನಲ್ಲಿ ಅಪಘಾತ ಸಂಭವಿಸಿದರೆ ಮೊದಲಿಗೆ ತಲೆಗೆ ತೀವ್ರ ಪೆಟ್ಟು ಬೀಳುತ್ತದೆ. ದೇಹದ ಬೇರೆ ಭಾಗಕ್ಕೆ ಪೆಟ್ಟು ಬಿದ್ದರೆ ಪ್ರಾಣ ಉಳಿಸಬಹುದು. ಆದರೆ ತಲೆಗೆ ಪೆಟ್ಟು ಬಿದ್ದರೆ ಪ್ರಾಣ ಉಳಿಸುವುದು ತೀರಾ ಕಷ್ಟ 
ಜಿಲ್ಲಾಸ್ಪತ್ರೆ ವೈದ್ಯ
ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜಖಂಗೊಂಡಿದ್ದ ಔಡಿ ಕಾರು
ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜಖಂಗೊಂಡಿದ್ದ ಔಡಿ ಕಾರು
- ಮದ್ಯ ಕುಡಿದು ಚಾಲನೆ: ಅಪಘಾತಕ್ಕೆ ದಾರಿ
ಜಿಲ್ಲೆಯಾದ್ಯಂತ ರಾತ್ರಿ ಹೊತ್ತಿನಲ್ಲಿ ಹಲವು ಬೈಕ್ ಸವಾರರು ಮದ್ಯ ಕುಡಿದು ಸವಾರಿ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿಯೂ ಅಪಘಾತಗಳು ಸಂಭವಿಸುತ್ತಿದ್ದು ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರನ್ನು ನಂಬಿರುವ ಕುಟುಂಬ ಕಂಗಾಲಾಗುತ್ತಿದೆ. ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯಿದೆ. ಹಲವು ಕಡೆಗಳಲ್ಲಿ ಗಸ್ತು ತಿರುಗಲು ಹಾಗೂ ವಾಹನ ತಪಾಸಣೆ ಮಾಡಲು ಆಗುತ್ತಿಲ್ಲ. ಕೆಲವು ಬಾರಿ ಮಾತ್ರ ಪೊಲೀಸರು ರಸ್ತೆಗೆ ಇಳಿದು ಮದ್ಯ ಕುಡಿದು ವಾಹನ ಚಲಾಯಿಸುವವರನ್ನು ಪತ್ತೆ ಮಾಡಿ ದಂಡ ವಿಧಿಸುತ್ತಿದ್ದಾರೆ. ಬಹುತೇಕ ದಿನಗಳಲ್ಲಿ ಮದ್ಯ ಕುಡಿದು ಚಾಲನೆ ಮಾಡುವವರ ಪತ್ತೆ ಸಮರ್ಪಕವಾಗಿ ಆಗುತ್ತಿಲ್ಲ.
ಹಾವೇರಿ ತಾಲ್ಲೂಕಿನ ಗೌರಾಪುರ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಜಖಂಗೊಂಡಿದ್ದ ಬೈಕ್
ಹಾವೇರಿ ತಾಲ್ಲೂಕಿನ ಗೌರಾಪುರ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಜಖಂಗೊಂಡಿದ್ದ ಬೈಕ್
ಹದಗೆಟ್ಟ ರಸ್ತೆಗಳಿಂದ ಅಪಘಾತ
ಜಿಲ್ಲೆಯಾದ್ಯಂತ ಹಲವು ರಸ್ತೆಗಳು ಹಾಳಾಗಿ ಗುಂಡಿ ಬಿದ್ದು ಹದಗೆಟ್ಟಿವೆ. ಇಂಥ ರಸ್ತೆಗಳಲ್ಲಿಯೂ ಬೈಕ್‌ಗಳು ಉರುಳಿಬಿದ್ದು ಅಪಘಾತಗಳು ಸಂಭವಿಸುತ್ತಿದ್ದು ಸವಾರರು ಹಾಗೂ ಹಿಂಬದಿ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಶಿಗ್ಗಾವಿ ತಾಲ್ಲೂಕಿನ ಬಂಕಾಪುರ–ಹಾನಗಲ್ ರಸ್ತೆಯಲ್ಲಿ ಗುಂಡಿಯಿಂದ ಅಪಘಾತ ಸಂಭವಿಸಿ ಬೈಕ್‌ನ ಹಿಂಬದಿ ಕುಳಿತಿದ್ದ ಅನ್ನಪೂರ್ಣಾ ಕರೆಗೌಡ್ರ (45) ಎಂಬುವವರು ಮೃತಪಟ್ಟಿದ್ದಾರೆ. ಗಂಗಿಭಾವಿ ದೇವಸ್ಥಾನ ಬಳಿ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಬೈಕ್ ಉರುಳಿಬಿದ್ದು ಧರಿಯಪ್ಪ ಬಸಪ್ಪ ಡವಗಿ (46) ಎಂಬುವವರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT