ತೂಬುಗಳ ದುರಸ್ತಿಗೆ ಅಂದಾಜು ವೆಚ್ಛಗಳ ಬಗ್ಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಬೇಗನೇ ಟೆಂಡರ ಕರೆದು ತೂಬುಗಳ ದುರಸ್ತಿ ಕಾರ್ಯವನ್ನು ಆರಂಭಿಸಲಾಗುವುದು
ರವೀಂದ್ರ ಡಿ. ಎಲಿಗಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೀರಾವರಿ ಇಲಾಖೆ
‘11 ತೂಬುಗಳ ಮರು ನಿರ್ಮಾಣ’
‘ತಿಳವಳ್ಳಿಯ ಐತಿಹಾಸಿಕ ದೊಡ್ಡಕೆರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಜ ಮಹಾರಾಜರು ಮತ್ತು ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಕೆರೆಯ ತೂಬುಗಳು ಗಟ್ಟಿಮುಟ್ಟಾಗಿದ್ದವು. ಒಂದೇ ಒಂದು ಹನಿ ನೀರು ಸಹಾ ತೂಬುಗಳ ಮೂಲಕ ಸೋರಿಕೆ ಆಗುತ್ತಿರಲಿಲ್ಲ’ ಎಂದು ರೈತರು ತಿಳಿಸಿದರು. ‘ಈಗ ತಿಳವಳ್ಳಿ ಏತ ನೀರಾವರಿಯ ಎರಡನೇ ಹಂತದ ಕಾಮಗರಿಯಲ್ಲಿ ಕೆರೆಯ 11 ತೂಬುಗಳನ್ನು ಮರು ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಾಗಿದ್ದರಿಂದ ಕಾಮಗಾರಿ ಪೂರ್ಣಗೊಂಡ ಐದಾರು ವರ್ಷದಲ್ಲಿ ಎಲ್ಲ ತೂಬುಗಳಲ್ಲಿ ನೀರಿನ ಸೋರಿಕೆ ಉಂಟಾಗುತ್ತಿದೆ. ಈ ಬಗ್ಗೆ ನೀರಾವರಿ ಇಲಾಖೆ ಇಂಜಿನಿಯರಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.