ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುಸಖಿಯರಿಗೆ ತರಬೇತಿ ಕಾರ್ಯಾಗಾರ

Published 7 ಆಗಸ್ಟ್ 2023, 15:56 IST
Last Updated 7 ಆಗಸ್ಟ್ 2023, 15:56 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಸಣ್ಣ, ಅತಿ ಸಣ್ಣ ರೈತರಿಗೆ ಪಶು ಸಂಗೋಪನೆ ಬಗ್ಗೆ ಮಾಹಿತಿ ನೀಡಲು ಪಶು ಸಖಿಗಳು ಪಶು ವೈದ್ಯಾಧಿಕಾರಿಗೆ ಸಹಕಾರ ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ಸುಮಲತಾ ಎಸ್‌.ಪಿ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ಪಂಚಾಯಿತಿ ಹಾವೇರಿ, ತಾಲ್ಲೂಕು ಪಂಚಾಯಿತಿ ಹಾಗೂ ಪಶುವೈದ್ಯ ಇಲಾಖೆ ಆಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ 40 ಗ್ರಾಮ ಪಂಚಾಯಿತಿಯ ಪಶುಸಖಿಯರ ಒಂದು ದಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪಶು ಇಲಾಖೆ ಸಹಾಯಕ ನಿರ್ದೇಶ ಡಾ.ಪರಮೇಶ್ವರ ಹುಬ್ಬಳ್ಳಿ, ‘ಪಶು ಸಖಿಗಳು ಪಶುಸಂಗೋಪನಾ ಇಲಾಖೆಯ ಸಹಯೋಗದೊಂದಿಗೆ ಕಾರ್ಯಗಳನ್ನು ನಿರ್ವಹಿಸಿ, ಗ್ರಾಮೀಣ ಭಾಗದ ರೈತರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು’ ಎಂದರು.

ಪಶು ಸಖಿಗಳ ಕಾರ್ಯಗಳ ಬಗ್ಗೆ, ಪಶುಗಳಿಗೆ ಕಾಣಿಸಿಕೊಳ್ಳುವ ರೋಗಗಳು, ಪ್ರಾಥಮಿಕ ಚಿಕಿತ್ಸೆ, ಪಶುಗಳ ಪೋಷಣೆ ಮತ್ತು ಪೌಷ್ಠಿಕ ಆಹಾರ, ಹೆಚ್ಚುವರಿ ಹಾಲಿನ ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು.

ಡಾ. ಎಚ್.ಸಿ. ಪಾಟೀಲ, ಡಾ.ಪವನ್ ಬೆಳಕೇರಿ, ಡಾ. ಪವನ್ ಬಿ.ಎಲ್ ತರಬೇತಿ ನೀಡಿದರು.

ಎನ್‌ಆರ್‌ಎಲ್‌ಎಂನ ವಲಯ ಮೇಲ್ವಿಚಾರಕ ಹನುಮಂತಪ್ಪ ಸಾರಥಿ, ಟಿಪಿಎಂ ಅನಿಲ್ ಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT