ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರೇಕೆರೂರು: ಗಮನಕ್ಕೆ ಬಾರದೇ ಬ್ಯಾಂಕ್ ಖಾತೆಯಿಂದ ₹49 ಸಾವಿರ ಡ್ರಾ

Published 21 ಮೇ 2024, 16:22 IST
Last Updated 21 ಮೇ 2024, 16:22 IST
ಅಕ್ಷರ ಗಾತ್ರ

ಹಿರೇಕೆರೂರು: ತಾಲ್ಲೂಕಿನ ಯಮ್ಮಿಗನೂರು ಗ್ರಾಮದ ಯುವರಾಜ ಎನ್. ಚಿಕ್ಕಬಾಸೂರು ಎಂಬುವರ ಬ್ಯಾಂಕ್ ಖಾತೆಯಿಂದ ಅವರ ಗಮನಕ್ಕೆ ಬಾರದೇ ಒಟ್ಟು ₹49,999 ಸಾವಿರ ಡ್ರಾ ಮಾಡಿಕೊಳ್ಳಲಾಗಿದೆ.

ಚಿಕ್ಕೇರೂರು ಗ್ರಾಮದ ಕೆನರಾ ಬ್ಯಾಂಕ್‌ನ ಅವರ ಉಳಿತಾಯ ಖಾತೆಯಿಂದ ಮೇ 10 ರಂದು ರಾತ್ರಿ 10.40ಕ್ಕೆ ₹25 ಸಾವಿರ ಹಾಗೂ 10:49ಕ್ಕೆ ₹24,999 ಸಾವಿರ ಗಮನಕ್ಕೆ ಬಾರದೆ ಬ್ಯಾಂಕ್‌ ಖಾತೆಯಿಂದ ಎರಡು ಬಾರಿ ಹಣ ಡ್ರಾ ಮಾಡಲಾಗಿದೆ. ಮೇ 10 ರಂದು ರೈತ ಯುವರಾಜ ಅವರ ಮೊಬೈಲ್‌ಗೆ 49,999 ಸಾವಿರ ಹಣ ಡ್ರಾ ಆಗಿರುವ ಬಗ್ಗೆ ಮೇಸೆಜ್ ಬಂದಿದೆ.

ಇದನ್ನು ನೋಡಿ ಗಾಬರಿಯಿಂದ ಯುವರಾಜ ಅವರು ತಾವು ಖಾತೆ ಹೊಂದಿರುವ ಚಿಕ್ಕೇರೂರು ಗ್ರಾಮದ ಕೆನರಾ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಹಣ ಡ್ರಾ ಆಗಿರುವ ಬಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಮೇ 13 ರಂದು ಹಾವೇರಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೀಜ,ಗೊಬ್ಬರಕ್ಕೆ ಅಂತ ಹಣವನ್ನು ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಇಟ್ಟುಕೊಂಡಿದೆ. ಆದರೆ ನನಗೆ ಗೋತ್ತಿಲ್ಲದೆ ನನ್ನ ಖಾತೆಯಿಂದ ಇಷ್ಟೊಂದು ಹಣ ಡ್ರಾ ಆಗಿದೆ. ಇದಕ್ಕೆ ಹೊಣೆ ಯಾರು?’ ಎಂದು ಹಣ ಕಳೆದಕೊಂಡ ರೈತ ಯುವರಾಜ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT