ಮಂಗಳವಾರ, ನವೆಂಬರ್ 24, 2020
26 °C

ವೀರಶೈವ ಮಹಾಸಭಾ ಚುನಾವಣೆ ಡಿ.27ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ರಾಜ್ಯದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ 12 ಜಿಲ್ಲಾ ಘಟಕ ಮತ್ತು 106 ತಾಲ್ಲೂಕು ಘಟಕಗಳಿಗೆ ಈಗಾಗಲೇ ಚುನಾವಣೆ ನಡೆದಿದೆ. ಅರ್ಹತೆ ಪಡೆದಿರುವ ಉಳಿದ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಡಿ.27ರಂದು ಚುನಾವಣೆ ನಡೆಯಲಿದೆ’ ಎಂದು ಚುನಾವಣಾಧಿಕಾರಿ ಎಚ್‌.ಎಂ. ರೇಣುಕ ಪ್ರಸನ್ನ ತಿಳಿಸಿದರು. 

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಮಹಾಸಭಾದ ಘಟಕಗಳಿಗೆ ಸದಸ್ಯರಾಗಲು ನ.10 ಕೊನೆಯ ದಿನ. ಅಂತಿಮ ಮತದಾರರ ಪಟ್ಟಿಯನ್ನು ನ.30ರಂದು ಪ್ರಕಟಿಸಲಾಗುವುದು. ಡಿ.9ರಿಂದ ಡಿ.15ರವರೆಗೆ ನಾಮಪತ್ರ ಸ್ವೀಕಾರ, ಡಿ.16ರಂದು ನಾಮಪತ್ರ ಪರಿಶೀಲನೆ, ಡಿ.19ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ ಎಂದು ಮಾಹಿತಿ ನೀಡಿದರು. 

ಡಿ.27ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ನಂತರ ಮತಗಳ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುವುದು. ನಿಯಮಗಳ ಪ್ರಕಾರ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಯಬೇಕಾದರೆ ಕನಿಷ್ಠ 1000 ಸದಸ್ಯರು, ತಾಲ್ಲೂಕು ಘಟಕಗಳಿಗೆ ಕನಿಷ್ಠ 300 ಸದಸ್ಯರಿರಬೇಕು ಎಂದರು. 

ಹಾವೇರಿ ಜಿಲ್ಲಾ ಘಟಕದಲ್ಲಿ 480 ಮತದಾರ ಸದಸ್ಯರಿದ್ದು, ಇನ್ನೂ 520 ಸದಸ್ಯರು ನೋಂದಣಿಯಾದರೆ, ಜಿಲ್ಲಾ ಘಟಕವು ಚುನಾವಣೆಗೆ ಅರ್ಹತೆ ಪಡೆಯಲಿದೆ. ಸದಸ್ಯತ್ವ ಪಡೆಯಲು ಆಜೀವ ಸದಸ್ಯತ್ವ, ಆಶ್ರಯದಾತ, ಉಪಪೋಷಕ, ಸಹ ಪೋಷಕ, ದಾನಿ, ಮಹಾದಾನಿ, ಪೋಷಕ, ಮಹಾಪೋಷಕ ಸೇರಿದಂತೆ ಒಟ್ಟು 12 ವರ್ಗಗಳಿವೆ. ಪ್ರತಿಯೊಂದು ವರ್ಗಕ್ಕೂ ಪ್ರತ್ಯೇಕ ನೋಂದಣಿ ಶುಲ್ಕವಿದೆ. ಸಮುದಾಯದವರು ನೋಂದಣಿ ಮಾಡಿಕೊಂಡು ಮಹಾಸಭಾ ಬೆಳವಣಿಗೆಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು. 

ಪತ್ರಿಕಾಗೋಷ್ಠಿಯಲ್ಲಿ ಕೆ.ಎನ್‌.ಕೊರದಾನಿಮಠ, ಎಂ.ಎಸ್‌.ಕೋರಿಶೆಟ್ಟರ್‌, ಎಂ.ಎಸ್‌.ಅರಕೆರಿ, ಗುರುರಾಜ ಹುಣಸಿಮರದ, ಚಂದ್ರಣ್ಣ ಸೊಪ್ಪಿನ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.