ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿರಿಗೆರೆ ಮಠದ ಪೀಠಾಧಿಪತಿ ಬದಲಾಗುವವರೆಗೂ ಹೋರಾಟ: ಬಿ.ಸಿ. ಪಾಟೀಲ

Published : 14 ಆಗಸ್ಟ್ 2024, 14:28 IST
Last Updated : 14 ಆಗಸ್ಟ್ 2024, 14:28 IST
ಫಾಲೋ ಮಾಡಿ
Comments

ಹಿರೇಕೆರೂರು: ಸಿರಿಗೆರೆಯ ಶ್ರೀಮದ್ ಸಾಧು ಸದ್ಧರ್ಮ ಪೀಠಕ್ಕೆ ನೂತನ ಪೀಠಾಧಿಪತಿ ನೇಮಕ ಆಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ನಿವಾಸದಲ್ಲಿ ಮಂಗಳವಾರ ನಡೆದ ಸಾಧು ಸದ್ಧರ್ಮ ವೀರಶೈವ ಸಮಾಜ ಸಭೆಯಲ್ಲಿ ಮಾತನಾಡಿದ ಅವರು, ಮರುಳುಸಿದ್ದರು ಸ್ಥಾಪಿಸಿದ ಶ್ರೀಮದ್ ಸಾಧು ಸದ್ಧರ್ಮ ಸಮಾಜಕ್ಕೆ ಭವ್ಯವಾದ ಪರಂಪರೆ ಇದೆ. ಸಿರಿಗೆರಿ ಮಠ ರಾಜ್ಯದಲ್ಲಷ್ಟೇ ಅಲ್ಲದೆ ರಾಷ್ಟ್ರದಲ್ಲಿಯೂ ತನ್ನ ಸಮಯ ಪ್ರಜ್ಞೆ ಹಾಗೂ ಶಿಸ್ತಿಗೆ ಹೆಸರುವಾಸಿಯಾಗಿತ್ತು. ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಈ ದುಗ್ಗಾಣಿ ಮಠವನ್ನು ಸುಜ್ಞಾನಿ ಮಠವಾಗಿಸಲು ಸಾಕಷ್ಟು ಶ್ರಮಿಸಿದ್ದಾರೆ. ಈ ಮಠ ಏಕವ್ಯಕ್ತಿಯ ಕೈಯಲ್ಲಿ ಸಿಕ್ಕು ನಲುಗಿದೆ. ಅದರಿಂದ ಪಾರು ಮಾಡಬೇಕೆಂಬುದೇ ನಮ್ಮ ಸಮಾಜದದವರ ಆಶಯವಾಗಿದೆ ಎಂದರು.

ಅಣಬೇರು ರಾಜಣ್ಣ ಮಾತನಾಡಿ, ಬೃಹನ್ ಮಠದ ಹಳೆಯ ಡೀಡ್ ಪ್ರಕಾರ ನೂತನ ಪೀಠಾಧಿಪತಿ ಆಯ್ಕೆ ಮಾಡಬೇಕು. ಪೂಜ್ಯರು ನಿವೃತ್ತಿ ಘೋಷಣೆ ಮಾಡಬೇಕು ಇಲ್ಲವಾದಲ್ಲಿ ನಮ್ಮ ಹೋರಾಟ ಉಗ್ರವಾಗಿರುತ್ತದೆ ಎಂದರು.

ಬ್ಯಾಡಗಿ ತಾಲ್ಲೂಕಿನ ಮಾಜಿ ಶಾಸಕ ಸುರೇಶಗೌಡ ಪಾಟೀಲ, ಶಿಕಾರಿಪುರ ತಾಲ್ಲೂಕಿನ ಸಾಧು ಸಮಾಜದ ಅಧ್ಯಕ್ಷ ಚಂದ್ರಪ್ಪ ಜಂಬೂರ, ಸಮಾಜದ ಮುಖಂಡರಾದ ಎಸ್.ಎಸ್. ಪಾಟೀಲ, ಮಲ್ಲೇಶಪ್ಪ ಅರಿಕೇರಿ, ಮಾಲತೇಶ ಗಂಗೋಳ, ಎಸ್.ಬಿ.ತಿಪ್ಪಣ್ಣನವರ, ಬಿ.ಎನ್.ಬಣಕಾರ, ಜಟ್ಟಪ್ಪ ಕರೆಗೌಡ್ರು, ಕೆ.ಬಿ. ಬಾಳಿಕಾಯಿ, ಪ್ರಕಾಶಗೌಡ ಗೌಡರ, ಜಯಣ್ಣ ಹೊಳೆ ಅನ್ವೇರಿ, ಆರ್.ಎನ್.ಗಂಗೋಳ, ಆರ್.ಎನ್.ಬಾಳಿಕಾಯಿ, ದೊಡ್ಡ ಗೌಡ್ರು ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT