ರಾಣೆಬೆನ್ನೂರು: ‘ಯುವ ಜನರಿಗೆ ವಿವೇಕಾನಂದರು ಆದರ್ಶಪ್ರಾಯರಷ್ಟೇ ಅಲ್ಲ, ಅವರ ವ್ಯಕ್ತಿತ್ವ ಎಲ್ಲ ಯುವಕ ಯುವತಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ’ ಎಂದು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಹೇಳಿದರು.

ತಾಲ್ಲೂಕಿನ ಕುಪ್ಪೇಲೂರು ಗ್ರಾಮದಲ್ಲಿ ಗುರುವಾರ ನಡೆದ ಕೆಎಲ್ಇ ಸಂಸ್ಥೆಯ ರಾಜ ರಾಜೇಶ್ವರಿ ಮಹಿಳಾ ಮಹಾವಿದ್ಯಾಲಯದ ಎನ್.ಎಸ್.ಎಸ್ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬ ವ್ಯಕ್ತಿಯು ದೇವರ ಮೇಲೆ, ದೇಶದ ಮೇಲೆ ಪ್ರೀತಿ ಇದ್ದಾಗ ನಮ್ಮಲ್ಲಿ ಉತ್ತಮ ವ್ಯಕ್ತಿತ್ವದ ಮೌಲ್ಯಗಳನ್ನು ಹೊಂದಲು ಸಾಧ್ಯ. ಶಿಕ್ಷಣದಿಂದ ವಿದ್ಯಾರ್ಥಿಗಳ ಯೋಗ್ಯತೆ ಹೆಚ್ಚಾಗಬೇಕು. ಜ್ಞಾನ ಹೆಚ್ಚಾಗಬೇಕಾದರೆ ಮೌಲ್ಯಯುತ ಶಿಕ್ಷಣ ಪಡೆಯಬೇಕು. ಪ್ರತಿಯೊಬ್ಬರಲ್ಲಿ ದೈಹಿಕ, ಮಾನಸಿಕ ಸಾಮರ್ಥ್ಯ ಬೆಳಸಿಕೊಂಡರೆ ನಾವು ಸಾಧನೆ ಮಾಡಲು ಸಾಧ್ಯ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ಶಂಕ್ರಮ್ಮ ಸಣ್ಣಗೌಡ ನಾಗಪ್ಪನವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಎ., ಮಾರ್ಕಂಡೆಪ್ಪ ನೇಕಾರ, ಹನುಮಗೌಡ ಸಂಕನಗೌಡ್ರ, ಈಶಪ್ಪ ದುರುಗಪ್ಪ ಪೂಜಾರ, ಹನುಮಮತಪ್ಪ ಸಂಕಣ್ಣನವರ, ಹಾಲಯ್ಯ ಮಠದ, ಪರಶುರಾಮ ಅಳಲಗೇರಿ, ರಾಮಪ್ಪ ಹರಿಹರ, ಗದಿಗೆಪ್ಪ ಕ ಬೀರಣ್ಣನವರ, ಖಲೀಲ್ ಸಾಬ್ ಹುಲಿಹಳ್ಳಿ, ಶಿವಪುತ್ರಪ್ಪ ಹನುಮನಾಯ್ಕರ, ಲತಾ ಅಂಗಡಿ, ಸಾವಿತ್ರಾ ಕೋಟಿಹಾಳ, ದುರುಗಪ್ಪ ಕರಿಯಜ್ಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.