ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗ ದಿನ ಆಚರಣೆ ನಾಳೆ

Published 19 ಜೂನ್ 2024, 14:50 IST
Last Updated 19 ಜೂನ್ 2024, 14:50 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಗರದ ಕೆಎಲ್‌ಇ ಸಂಸ್ಥೆಯ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21ರಂದು ಸಂಜೆ 5.30ಕ್ಕೆ ಪತಂಜಲಿ ಯೋಗ ಪೀಠ ಹಾಗೂ ಕೆಎಲ್‌ಇ ಅಂಗ ಸಂಸ್ಥೆಗಳ ಆಶ್ರಯದಲ್ಲಿ ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪತಂಜಲಿ ಯೋಗ ಸಮಿತಿ ಸಮಿತಿ ಪ್ರಭಾರಿ ರವೀಂದ್ರ ವಿಜಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಇಲ್ಲಿನ ಮಾಗೋಡ ರಸ್ತೆಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್‌ ಸಾನ್ನಿಧ್ಯ ವಹಿಸುವರು. ಶಾಸಕ ಪ್ರಕಾಶ ಕೋಳಿವಾಡ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಬಿ.ಕೆ. ಮಾಲತಿಅಕ್ಕ, ತಹಶೀಲ್ದಾರ ಟಿ. ಸುರೇಶಕುಮಾರ, ಡಿವೈಎಸ್‌ಪಿ ಗಿರೀಶ ಬೋಜಣ್ಣನವರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ವಿ.ಪಿ.ಲಿಂಗನಗೌಡ್ರ ಮುಖ್ಯ ಅತಿಥಿಗಳಾಗಿ ಆಗಮಿಸುವರು’ ಎಂದು ತಿಳಿಸಿದ್ದಾರೆ.

ಭಾರತ ಸ್ವಾಭಿಮಾನಿ ಟ್ರಸ್ಟ್‌ ಪ್ರಭಾರಿ ಆರ್‌.ಎನ್‌.ರಾಠೋಡ, ರಾಜ್ಯ ಘಟಕದ ಸದಸ್ಯ ಕೆ.ಜಿ. ದಿವಾಕರಮೂರ್ತಿ, ಮಹಿಳಾ ಮಂಡಳ ಪ್ರಭಾರಿ ವಜ್ರೇಶ್ವರಿ ಲದ್ವಾ, ರಾಜ್ಯ ಕೋರ್‌ ಕಮಿಟಿ ಸದಸ್ಯ ಜ್ಯೋತಿ ಜಂಬಿಗಿ ಹಾಗೂ ಕಿಸಾನ್‌ ಸೇವಾ ಸೇವಾ ಸಮಿತಿ ನಾಗಪ್ಪ ಲಮಾಣಿ, ಜಗದೀಶ ಸುಣಗಾರ, ಎಂ.ಬಿ.ಮೋಟಳ್ಳಿ, ಆರ್‌.ಬಿ.ಪಾಟೀಲ, ಲಲಿತಾ ಮೇಲಗಿರಿ, ಕವಿತಾ ಕುಬಸದ ಇರುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT