ಹಾನಗಲ್: `ರೈತರು, ಕೃಷಿ ಕೂಲಿ ಕಾರರು ಹಲವಾರು ಸಮಸ್ಯೆಗಳಲ್ಲಿ ಸಿಲು ಕಿದ್ದು, ಕೃಷಿಯೋಗ್ಯ ಭೂಮಿಯನ್ನು ಉಳಿಸಿಕೊಳ್ಳುವ ಹೊರಾಟದ ಅನಿ ವಾರ್ಯತೆ ಕೃಷಿ ಸಮೂಹದ ಬಹು ದೊಡ್ಡ ಸವಾಲು ಎಂಬಂತಾಗಿದೆ~ ಎಂದು ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿ ಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಸ್ವಾಮಿ ಹೇಳಿದರು.

ಗುರುವಾರ ಇಲ್ಲಿನ ಫ್ರೆಂಡ್ಸ್ ಅಸೋ ಸಿಯೇಶನ್ ಸಭಾ ಭವನದಲ್ಲಿ ನಡೆದ ತಾಲ್ಲೂಕಿನ ಹಿರಿಯ ಕೃಷಿ ಹೋರಾಟ ಗಾರ `ಕಾಮ್ರೆಡ್ ಹಕ್ಕಲಗೌಡ ಪಾಟೀಲ ಸ್ಮರಣಾರ್ಥ~ ಹಾನಗಲ್ ತಾಲ್ಲೂಕು ರೈತ ಮತ್ತು ಕೃಷಿ ಕೂಲಿಕಾರರ ಸಭೆ ಯಲ್ಲಿ ಹಕ್ಕಲಗೌಡ ಪಾಟೀಲರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಸಂಘಟನಾ ಚತುರ ಮತ್ತು ರೈತರು, ಕೃಷಿ ಕೂಲಿಕಾರರ ಪರವಾಗಿ ಸರಕಾರದ ವಿರುದ್ಧ ಹೊರಾಟಗಳನ್ನು ನಡೆಸಿ ಸೆರೆ ಮನೆ ವಾಸ ಅನುಭವಿಸುವ ಮೂಲಕ ಹಲವಾರು ಭೂರಹಿತ ರೈತರಿಗೆ ಭೂಮಿ ಒದಗಿಸಿದ ಧೀಮಂತ ನಾಯಕ ಹಕ್ಕಲ ಗೌಡ ಪಾಟೀಲ ಅವರನ್ನು ಕಳೆದು ಕೊಂಡ ರೈತ ಚಳವಳಿ ಬಡವಾಗಿದ್ದು, ಅವರ ಚಿಂತನೆಗಳನ್ನು ಅಳವಡಿಸಿ ಕೊಂಡು ಕೃಷಿ ಕೂಲಿಕಾರರು ಸಂಘಟಿತ ರಾಗಿ ಹೊರಾಟ ರೂಪಿಸಬೇಕಾದ ಅವಶ್ಯಕತೆಯಿದೆ ಎಂದು ಕರೆ ನೀಡಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜ ಮಾತನಾಡಿ, ತಾಲ್ಲೂಕಿನ ಕೃಷಿ ಸಮೂಹದ ಹೋರಾ ಟದಲ್ಲಿ ಸದಾ ಮುಂಚೂಣಿಯಲ್ಲಿ ರುತ್ತಿದ್ದ ಹಕ್ಕಲಗೌಡ ಪಾಟೀಲ ಮತ್ತು ಎಂ.ಜಿನ್ನಾ ಅವರಂತಹ ನಾಯಕರನ್ನು ಕಳೆದುಕೊಂಡು ರೈತ ಳವಳಿ ಇಂದು ತಾಲ್ಲೂಕಿನಲ್ಲಿ ಕುಂಠಿತಗೊಳ್ಳುತ್ತಿರುವ ಆತಂಕ ಎದುರಾಗಿದೆ.

ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಂತರಿಕ ಕಲಹ, ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ರೈತ, ಕೃಷಿ ಕೂಲಿ ಕಾರರು ಸಂಘಟಿತರಾಗುವುದು ಅಗತ್ಯ ಎಂದರು.

ಸಂಘದ ಮುಖಂಡ ಫಕ್ಕೀರಪ್ಪ ಹೋತನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ನಾಯಕರಾದ ಬಿ.ಎಸ್.ಸೊಪ್ಪಿನ, ಭೀಮಣ್ಣ ಭೋವಿ, ಸಿ.ಎಂ.ಪಾಟೀಲ ಸಭೆಯಲ್ಲಿ ಮಾತನಾಡಿದರು.

ವಿ.ಡಿ. ತುಪ್ಪದ, ನೂರಹ್ಮದ ಖೇಣಿ, ಸುಲ್ತಾ ನಸಾಬ ಹಾವೇರಿ, ಮೆಹಬೂಬಖಾನ ಕಾಕಡ ಮತ್ತು ದಿ. ಹಕ್ಕಲಗೌಡ ಪಾಟೀಲ ಕುಟುಂಬ ವರ್ಗದ ಸದಸ್ಯರು ಉಪಸ್ಥಿತರಿದ್ದರು. ಶೇಕಣ್ಣ ಕತ್ತಿ ಸ್ವಾಗತಿಸಿದರು. ಅಣ್ಣಪ್ಪ ಚಿಕ್ಕಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.