ರಾಣೆಬೆನ್ನೂರು: ನಗರಸಭೆಯ ದುರಾ ಡಳಿತ ಹಾಗೂ ಬಿಜೆಪಿ ಸರ್ಕಾರದ ವೈಫಲ್ಯ ಕುರಿತು ಮಾಜಿ ಸಚಿವ (ಕಾಂಗ್ರೆಸ್) ಕೆ.ಬಿ. ಕೋಳಿವಾಡ ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ನಗರಸಭೆ ಅಧ್ಯಕ್ಷ ಡಾ. ಗಣೇಶ ದೇವಗಿರಿಮಠ ಸ್ಪಷ್ಟಪಡಿಸಿದರು.

ನಗರಸಭೆಯ ದುರಾಡಳಿತ ಹಾಗೂ ಬಿಜೆಪಿ ಸರ್ಕಾರದ ವೈಫಲ್ಯ ವಿರುದ್ಧ ಕಾಂಗ್ರೆಸ್ ಪಕ್ಷವು ಇದೇ 8ರಂದು ನಗರದ ಎಪಿಎಂಸಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದೆ ಎಂದು ಕೋಳಿ ವಾಡ ಹೇಳಿದ್ದನ್ನು ದೇವಗಿರಿಮಠ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಖಂಡಿಸಿದರು.

ಕೋಳಿವಾಡ ಅವರು ಮಾಡಿರುವ 24 ಆರೋಪಗಳಲ್ಲಿ 21 ಆರೋಪಗಳು ನಗರಸಭೆಗೆ ಸಂಬಂಧಿಸಿದ್ದು, ಇದರಲ್ಲಿ ಯಾವುದೇ ಸತ್ಯಾಂಶಗಳಿಲ್ಲ ಎಂದರು.ನಗರಸಭೆ ಸರ್ಕಾರದ ಆದೇಶಗಳನ್ನು ಪಾಲಿಸುವುದು ಕರ್ತವ್ಯವಾಗಿರುತ್ತದೆ. ಅದರಂತೆ ಸಾರ್ವಜನಿಕ ಸೌಲಭ್ಯಕ್ಕಾಗಿ ನಗರಸಭೆ ಕೈಗೊಂಡ ಕಟ್ಟು-ನಿಟ್ಟಿನ ಕ್ರಮಗಳನ್ನು ದುರಾಡಳಿತವೆಂದು ಕಾಂಗ್ರೆಸ್ ಪರಿಗಣಿಸಿರುವುದು ಸರಿಯಲ್ಲ ಎಂದರು.

ರಾಜಕೀಯ ದುರುದ್ದೇಶಕ್ಕಾಗಿ ನಗರ ಸಭೆಯ ಮೇಲೆ ಗೂಬೆ ಕೂರಿಸುವ ಬದಲು ಅವರ (ಕಾಂಗ್ರೆಸ್) ಅಧಿಕಾರದ ಅವಧಿಯಲ್ಲಿ ನಗರಸಭೆಯನ್ನು ಯಾವ ರೀತಿ ಹರಾಜು ಮಾಡಿದ್ದರು ಎಂಬು ದನ್ನು ನೆನಪಿಸಿಕೊಳ್ಳಲಿ ಎಂದು ಡಾ. ದೇವಗಿರಿಮಠ ತಿರುಗೇಟು ನೀಡಿದರು.

ಕೇವಲ ಬೆರಳೆಣಿಕೆ ಆರೋಪಗಳ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡುವಂತೆ ಬಿಂಬಿಸುತ್ತಿರುವುದು ರಾಜಕೀಯ ದುರುದ್ದೇಶಕ್ಕೆ ಹೊರತು, ಸಾರ್ವಜನಿಕರ ಹಿತಾಸಕ್ತಿಗೆ ಅಲ್ಲ. ಪಾರ್ಕ್ ಶುಲ್ಕ, ಅಭಿವೃದ್ಧಿ ಕರ ಕುರಿತು ಮಾತನಾಡುವ ಇವರು ನಾಲ್ಕೂವರೆ ವರ್ಷ ಎಲ್ಲಿ ಹೋಗಿದ್ದರು ಎಂದು ಜನರು ಕೇಳುತ್ತಿದ್ದಾರೆ ಎಂದು ದೇವಗಿರಿ ಮಠ ಹೇಳಿದರು.

ಮಾಜಿ ಸಚಿವ ಕೋಳಿವಾಡರು ಮಾಡಿದ ಎಲ್ಲ ಆರೋಪಗಳು ಸುಳ್ಳು. ಎಲ್ಲ ಕಾನೂನು ಮತ್ತು ಸರ್ಕಾರದ ಆದೇಶದ ಪ್ರಕಾರ ಕಾರ್ಯ ನಿರ್ವಹಿ ಸಿದ್ದೇವೆ, ಬೇಕಾದರೆ ಅಗತ್ಯ ದಾಖಲೆ ಗಳನ್ನು ನೀಡಲಾಗುವುದು, ಸುಮ್ಮನೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು. ವಿಶ್ವನಾಥ ಪಾಟೀಲ. ಎಂ.ಎಂ. ಗುಡಗೂರು, ಚೋಳಪ್ಪ ಕಸವಾಳ, ರಮೇಶ ನಾಯಕ, ಸತೀಶ ಮಲ್ಲನ ಗೌಡ್ರ, ಶೇಖಪ್ಪ ಹೊಸಗೌಡ್ರ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.